ಸುದ್ದಿ ಕನ್ನಡ ವಾರ್ತೆ
ಶಿರಸಿ: ಸೋಂದಾ ಸ್ವರ್ಣವಲ್ಲಿ ಶ್ರೀ ಮಠದ ಸೀಮಾ ಪರಿಷತ್ ನ ಆಡಳಿತ ಮಂಡಳಿಯ ಅವಧಿ ಮುಗಿದ ಹಿನ್ನಲೆಯಲ್ಲಿ ಆಡಳಿತ ಮಂಡಳಿಯ ನೂತನ ಸದಸ್ಯರ ಆಯ್ಕೆಮಾಡಲು ಸಭೆ ಕರೆಯಲಾಗಿತ್ತು ಈ ಹಿನ್ನಲೆಯಲ್ಲಿ ಸೋಮವಾರ ದಿ.21 ರಂದುಶ್ರೀ ಸೋಮೇಶ್ವರ ದೇವಸ್ಥಾನ ಯರಮುಖ (ಗುಂದ )ದಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಗೆ ವೀಕ್ಷಕರಾಗಿ ಶ್ರೀ ಮಠದಿಂದ ಜಗದೀಶ ಅಣ್ಣಪ್ಪ ದೀಕ್ಷಿತ ಮತ್ತು ಭಾಸ್ಕರ್ ಗಜಾನನ ಹೆಗಡೆ ಆಗಮಿಸಿ, ಭಾಗವಹಿಸಿದ್ದರು.
ಇಂದಿನ ಸಭೆಯ ಅಧ್ಯಕ್ಷತೆಯನ್ನು ವೇಧಮೂರ್ತಿ .ಪ್ರಸನ್ನ ಭಟ್ಟ ಕರ್ಕಮನೆ ಅವರು ವಹಿಸಿಕೊಂಡು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.
ಸಭೆಯ ಅಣತಿಯಂತೆ ಶ್ರೀ ಮಠಕ್ಕೆ ಗುಂದ ಸೀಮಾ, ವ,ಬಾಗಿ ಪರಿಷತ್ ವತಿಯಿಂದ ಅಧ್ಯಕ್ಷರಾಗಿ ದತ್ತಾತ್ರೇಯ ತಿಮ್ಮಪ್ಪ ಹೆಗಡೆ ಪುನರಾಯ್ಕೆ ಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಶ್ರೀಕಾಂತ್ ಸದಾನಂದ ಹೆಗಡೆ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಸುಧಾಮ ಸುಬ್ರಾಯ ದಾನಗೇರಿ ಮೊರಡಾ, ಸರ್ವಾನುಮತ ದಿಂದ ಆಯ್ಕೆಯಾದರು.
ಸೀಮಾಪರಿಷತ್ ಆಡಳಿತ ಮಂಡಳಿಯ ಸದಸ್ಯರಾಗಿ ಗೋಪಾಲ ಭಟ್ಟ ಶಿವಪುರ ಆಯ್ಕೆಯಾಗಿದ್ದಾರೆ.
ಗುಂದ ಮತ್ತು ಚಾಪಖಂಡ ಭಾಗದ ಗಣ್ಯರು ಸಭೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.
