ಸುದ್ದಿ ಕನ್ನಡ ವಾರ್ತೆ
ಕಾರವಾರ: ತಾಲೂಕಿನ ಹಣಕೋಣದ ಶ್ರೀ ಸಾತೇರಿ ಚಣಕಾದೇವಿ (ಕುಲದೇವಿ) ಮಂದಿರದ 2026ನೇ ಸಾಲಿನ ವಾರ್ಷಿಕ ಉತ್ಸವವು ಸೆಪ್ಟೆಂಬರ್ 18ರಿಂದ 24ರ ವರೆಗೆ ನಡೆಯಲಿದೆ.
ಗರ್ಭಗುಡಿ ದ್ವಾರ ಮುಕ್ತ: ವರ್ಷಕ್ಕೊಮ್ಮೆ ಮಾತ್ರ ತೆರೆಯುವ ದೇವಿಯ ಗರ್ಭಗುಡಿಯ ದ್ವಾರವು ಸೆ. 18ರಂದು ಮಧ್ಯರಾತ್ರಿ 12 ಗಂಟೆಗೆ ತೆರೆಯಲಿದ್ದು, ಸೆ. 24ರ ವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ.
ವಿವಿಧ ಧಾರ್ಮಿಕ ಕಾರ್ಯಕ್ರಮಗಳು:
ಸೆ. 19ರಂದು ಊರಿನ ನಾಗರಿಕರಿಂದ ನವೆ ಅರ್ಪಣೆ, ಸಂಜೆ 4ಕ್ಕೆ ಕುಳಾವಿ ಬಾಂಧವರಿಂದ ‘ತಳಯಿ’ ಹಾಗೂ ಕುಳಾವಿಯ ಕುಮಾರಿ ಮತ್ತು ನವವಧುಗಳಿಂದ ‘ಅಡೇಕಿ’ ಅರ್ಪಣೆ ನಡೆಯಲಿದೆ.
ಅಂದು ಕುಳಾವಿ ಜನರ ಧಾರ್ಮಿಕ ವಿಧಿ ಇರುವುದರಿಂದ ಹೊರ ಊರಿನ ಭಕ್ತರ ಸೇವೆ ಸ್ವೀಕರಿಸಲಾಗುವುದಿಲ್ಲ.
ಸೆ. 20ರಿಂದ 24ರ ವರೆಗೆ ಬೆಳಿಗ್ಗೆ 8ರಿಂದ ಸಾರ್ವಜನಿಕ ಭಕ್ತರಿಗೆ ದರ್ಶನ, ಹಣ್ಣು-ಕಾಯಿ, ಉಡಿ, ಹರಕೆ, ತುಲಾಭಾರ ಸೇರಿದಂತೆ ವಿವಿಧ ಸೇವೆಗಳಿಗೆ ಅವಕಾಶವಿದೆ.
ಸೆ. 24ರಂದು ಸಂಜೆ 5ರ ವರೆಗೆ ಮಾತ್ರ ಸೇವೆ ಸ್ವೀಕರಿಸಲಾಗುವುದು.
ಸೆ. 20ರಿಂದ ಪ್ರತಿದಿನ ಬೆಳಿಗ್ಗೆ 9ಕ್ಕೆ ದೇವಿಗೆ ಅರ್ಪಿಸಿದ ಸೀರೆ ಹಾಗೂ ಇತರೆ ವಸ್ತುಗಳ ಜಾಹೀರ ಲೀಲಾವು ನಡೆಯಲಿದೆ.
ಅನ್ನಸಂತರ್ಪಣೆ ಮತ್ತು ಪೂಜೆ:
ಸೆ. 21ರಿಂದ 24ರ ವರೆಗೆ ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಅನ್ನಸಂತರ್ಪಣೆ ನಡೆಯಲಿದೆ.
ಸೆ. 20ರಿಂದ 23ರ ವರೆಗೆ ಸಂಜೆ 6:30ಕ್ಕೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಹಾಗೂ ರಾತ್ರಿ 9:30ಕ್ಕೆ ಪೂಜೆ ಮತ್ತು ತೀರ್ಥಪ್ರಸಾದ ವಿತರಣೆ ನಡೆಯಲಿದೆ.
