ಸುದ್ದಿ ಕನ್ನಡ ವಾರ್ತೆ
ಹಳಿಯಾಳ/ಜೋಯಿಡಾ:ತಾಲೂಕಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ರ ಗುರುವಾರ ನಾಗರೀಕರು ತಮ್ಮ ಮನೆಗಳಲ್ಲಿ ‘ಆಶೀರ್ವಾದದ ದೀಪ’ವನ್ನು ಬೆಳಗಿಸಿ, ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.

ಸೆಪ್ಟೆಂಬರ್ 17ರ ಸಂಜೆ 6 ರಿಂದ 7 ಗಂಟೆಯ ಅವಧಿಯಲ್ಲಿ ಜನರು ತಮ್ಮ ಮನೆಗಳಲ್ಲಿ ದೀಪವನ್ನು ಬೆಳಗಿಸಿ, ಈ ಮೂಲಕ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನ ಸೇವಕನಿಗೆ ಗೌರವ ಸಲ್ಲಿಸುವುದರ ಜೊತೆಗೆ, ಭಾರತದ ಅಭಿವೃದ್ಧಿ ಪಯಣಕ್ಕೆ ಶುಭ ಹಾರೈಸಿ, ಪ್ರಧಾನಿಯವರ ದೀರ್ಘಾಯುಷ್ಯ ಮತ್ತು ಆಯುರಾರೋಗ್ಯಕ್ಕಾಗಿ ಎಲ್ಲರೂ ಭಗವಂತನಲ್ಲಿ ಪ್ರಾರ್ಥಿಸಿದರು.
25 ವರ್ಷಗಳ ನಿಸ್ವಾರ್ಥ ಜನಸೇವೆ
“ರಾಷ್ಟ್ರ ಸೇವೆಯೇ ಜನಸೇವೆ” ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಜೀವನದ ಮೂಲಮಂತ್ರವಾಗಿದೆ. ಸರ್ಕಾರದ ಮುಖ್ಯಸ್ಥರಾಗಿ ಅವರು ಸಾರ್ವಜನಿಕ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಮುಡಿಪಾಗಿಟ್ಟಿರುವ 25 ವರ್ಷಗಳ ಸುದೀರ್ಘ ಪಯಣವು ಅಭೂತಪೂರ್ವವಾದದ್ದು. ಮೋದಿಯವರು ದೇಶವನ್ನು ಮುನ್ನಡೆಸಲು ಆರಂಭಿಸಿದ ದಿನಗಳಲ್ಲಿ ಪರಿಸ್ಥಿತಿ ಅಷ್ಟು ಸುಲಭವಾಗಿರಲಿಲ್ಲ. ಆದರೆ, ಅವರು ಹೊಸ ಯೋಜನೆಗಳು, ನೂತನ ಚಿಂತನೆ ಮತ್ತು ಸ್ಪಷ್ಟ ದೃಷ್ಟಿಕೋನದೊಂದಿಗೆ ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸುವ ವಿಶ್ವಾಸವನ್ನು ದೇಶದ ಯುವಜನತೆಯಲ್ಲಿ ತುಂಬಿದ್ದಾರೆ.
