ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ಮೌಲಂಗಿ ಗ್ರಾಮದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ಹಾಗೂ ಪೋಲಿಸ್ ಇಲಾಖೆ ದಾಂಡೇಲಿ ಠಾಣೆ ಮತ್ತು ಆರೋಗ್ಯ ಇಲಾಖೆ ಜೋಯ್ಡಾ ಇವರ ಸಹಯೋಗದೊಂದಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶಾಂತರಾಮ್ ಕಾಂಬ್ಳೆ ಎಎಸ್ಐ ಪೊಲೀಸ್ ಇಲಾಖೆ ದಾಂಡೇಲಿ ಇವರು ಸ್ವ ಸಹಾಯ ಸಂಘದ ಸದಸ್ಯರಿಗೆ ಪೋಲಿಸ್ ಇಲಾಖೆಯಿಂದ ಇರುವ ಕಾಯ್ದೆಗಳ ಕುರಿತು ಅರಿವು ಮೂಡಿಸಿದರು ವಾಸುದೇವ ಕಿತ್ತೂರು ಆಪ್ತ ಸಮಾಲೋಚಕರು ತಾಲೂಕ ಆಸ್ಪತ್ರೆ ಜೋಯಿಡಾಇವರು ಆರೋಗ್ಯದ ಕುರಿತು ಮಾಹಿತಿ ನೀಡಿದರು.ಸಹದೇವ್ ಕಾಂಬಳೆ ಎಸ್ಸಿ ಎಸ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಈ ಎಲ್ಲ ಮಾಹಿತಿಗಳನ್ನು ಸಂಘದ ಸದಸ್ಯರು ಪಡೆದುಕೊಳ್ಳಿ ಎಂದು ಶುಭ ಹಾರೈಸಿದರು.
ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಜೋಯಿಡಾ ಆಯೋಜಿಸಿ ವಂದಿಸಿದರು ಕಾರ್ಯಕ್ರಮದ ವೇದಿಕೆಯಲ್ಲಿ ಜೈ ಭೀಮ್ ಸ್ವಸಹಾಯ ಸಂಘ , ವೀರಮಾತಾ ಸ್ವಸಹಾಯ ಸಂಘ, ಶ್ರೀ ಜೀಜಾಬಾಯಿ ರೈತ ಮಹಿಳಾ ಸ್ವ ಸಹಾಯ ಸಂಘ, ಸಾವಿತ್ರಿಬಾಯಿ ಪುಲೆ ಸ್ವ ಸಹಾಯ ಸಂಘ ದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
