ಸುದ್ದಿ ಕನ್ನಡ ವಾರ್ತೆ
ಜೊಯಿಡಾ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಹಳಿಯಾಳ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉತ್ತರ ಕನ್ನಡ ಜಿಲ್ಲಾ ಕಾರವಾರ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ DMF ಉತ್ತರ ಕನ್ನಡ ಜಿಲ್ಲೆ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ 30 ದಿನಗಳ ಮಹಿಳೆಯರಿಗಾಗಿ ಟೈಲರಿಂಗ್ ತರಬೇತಿ ಸ್ಥಳ- ತೀನೈ ಘಾಟ್ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂತೋಷ್ ಕುಮಾರ್ ಸಂಪಗಾವಿ ವ್ಯವಸ್ತಾಪಕರು ಕೆನರಾ ಬ್ಯಾಂಕ್ ರಾಮನಗರ ಇವರು ಬಂದು ಶಿಬಿರಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸಿದರು ಈ ಸಂದರ್ಭದಲ್ಲಿಅವರು ಮಾತನಾಡಿ ಟೈಲರಿಂಗ್ ತರಬೇತಿ ಒಳ್ಳೆಯ ಉದ್ಯೋಗ ಜೀವನಕ್ಕೆ ಆದಾಯ ಬರುವಂಥ ಚಟುವಟಿಕೆ ಆಗಿರುತ್ತದೆ ಇದನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗಿ ಎಂದು ಶುಭ ಹಾರೈಸಿದರು ಪಿ ಡಿ. ಓ ಅಖೇತಿ ಮತ್ತು ರಾಮನಗರ ಗ್ರಾಮ ಪಂಚಾಯತದ ಅಂಬರೀಶ್ ಇವರು ಶಿಬಿರಾರ್ಥಿಗಳಿಗೆ ಸ್ವಯಂ ಉದ್ಯೋಗ ಮಾಡಲು ಸಹಾಯವಾಗುವ ಮಾರುಕಟ್ಟೆ ಕಟ್ಟಡದ ಲೈಸೆನ್ಸ್ ಕುರಿತು ಮಾತನಾಡಿ ಸರ್ಟಿಫಿಕೇಟ್ ವಿತರಿಸಿದರು. ವಿನಾಯಕ್ ಚವಾನ್ ಯೋಜನಾ ಸಂಯೋಜಕರು ಸಿಬಿಡಿ -ಆರ್ ಸೆಟ್ ಹಳಿಯಾಳ ಶಿಬಿರಾರ್ಥಿಗಳ ಕುರಿತು ಈ ಉದ್ಯೋಗದಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಮಾತನಾಡಿದರು ಕುಮಾರಿ ಅಂಕಿತಾ ದೇಸಾಯಿ ಐ ಎಫ್ ಸಿ ಆ್ಯಂಕರ್ ಎನ್ ಆರ್ ಎಲ್ ಎಮ್ ಸಂಜೀವಿನಿ ತಾಲೂಕ ಪಂಚಾಯತ್ ಜೋಯಿಡಾ ಇವರು ಶಿಬಿರಾರ್ಥಿಗಳ ಕುರಿತು ಟೈಲರಿಂಗ್ ಉದ್ಯೋಗವನ್ನು ಮುಂದುವರಿಸಿಕೊಂಡು ಮತ್ತು ಹೊಸ ಹೊಸ ವಿನ್ಯಾಸಗಳ ಕುರಿತು ಮಾಹಿತಿ ಪಡೆದು ಸ್ವಂತ ಉದ್ಯೋಗದಲ್ಲಿ ತೊಡಗುವಂತೆ ಪ್ರೇರೇಪಿಸಿದರು ವಾಸುದೇವ್ ಸಾವಂತ್ ತಿನೈ ಘಾಟ್ ಇವರು ಸ್ವ-ಉದ್ಯೋಗ ಮಾಡುವಂತೆ ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಕಿರಣ್ ಕುಮಾರ್ ಬಗಾಡೆ ನಿರ್ದೇಶಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ಇವರು ಶಿಬಿರಾರ್ಥಿಗಳಿಗೆ ಇನ್ನೂ ಹೆಚ್ಚಿನ ತರಬೇತಿ ಬೇಕೆಂದರೆ ಹಳಿಯಾಳಕ್ಕೆ ಬನ್ನಿ ಅಲ್ಲಿ ಬೇರೆ ಬೇರೆ ತರಬೇತಿಗಳ ಉಚಿತವಾಗಿ ಸಿಗುತ್ತದೆ ಎಂದು ಮಾಹಿತಿ ನೀಡಿ ಪ್ರಮಾಣ ಪತ್ರ ವಿತರಿಸಿದರು ಕುಮಾರಿ ಪೂಜಾ ನಾಯಕ್ ಸಂಪನ್ಮೂಲ ಮೂಲ ವ್ಯಕ್ತಿ ರಾಮನಗರ ವೇದಿಕೆ ಮೇಲೆ ಉಪಸ್ಥಿತರಿದ್ದರು ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಸಿಬಿಡಿ – ಆರ್ ಸೆಟ್ ಸಂಸ್ಥೆ ಜೋಯಿಡಾ ಕಾರ್ಯಕ್ರಮವನ್ನು ನಿರೂಪಿಸಿದರು ಮನೋಹರ್ ಚವರಿಯವರ್ ಕ್ಷೇತ್ರ ಮೇಲ್ವಿಚಾರಕರು ಆಯೋಜಿಸಿ ವಂದಿಸಿದರು. ಒಟ್ಟು 25 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
