ಸುದ್ದಿ ಕನ್ನಡ ವಾರ್ತೆ
ಬೈಲಹೊಂಗಲ-ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬೆಳವಡಿಯ ಭಾರತೀಯ ಸಂಸ್ಕೃತಿ ವಿದ್ಯಾ ಕೇಂದ್ರದ ವತಿಯಿಂದ ಬೈಲಹೊಂಗಲ ನಗರದಲ್ಲಿ ಡಾ.ಸಂತೋಷ ಗುರೂಜಿ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಡಾ.ಸಂತೋಷ ಶಂಕರೆಪ್ಪ ಯಕ್ಕುಂಡಿ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ ಬಸನಗೌಡ ಪಾಟೀಲ ಅವರು ಸನ್ಮಾನಿಸಿ,ಅಭಿನಂದಿಸಿ ಶುಭ ಕೋರಿದರು.
ಕನ್ನಡ ಜಾನಪದ ಪರಿಷತ್ತಿನ ಪತ್ರಿಕಾ ಪ್ರತಿನಿಧಿ, ಹಿರಿಯ ಪತ್ರಕರ್ತ ಶ್ರೀ ಮಹಾಂತೇಶ ಮಲ್ಲಪ್ಪ ರಾಜಗೋಳಿ,ಸಂಸ್ಥೆಯ ಕಾರ್ಯದರ್ಶಿ,ಶಿಕ್ಷಕ ಶ್ರೀ ಬಸವರಾಜ ಈ.ಜಾವೂರ,ವಿಶ್ರಾಂತ ಗಂಥಪಾಲಕರಾದ ಶ್ರೀ ಬಸವರಾಜ ಮೆಟಗುಡ್ಡ,ಶ್ರೀ ಅಶೋಕ ಮೆಟಗುಡ್ಡ,ಶ್ರೀ ಸುರೇಶ ಪಾರಶೆಟ್ಟಿ,ಯುವ ಮುಖಂಡ ಶ್ರೀ ಶಿವಾನಂದ ಸಂಭೋಜಿ ಉಪಸ್ಥಿತರಿದ್ದರು.
