ಸುದ್ದಿ ಕನ್ನಡ ವಾರ್ತೆ

​ಸರಳ ಸಜ್ಜನಿಕೆಯ, ನೇರ ನಡೆ-ನುಡಿಯ ಮುತ್ಸದ್ದಿ, ತಿಪಟೂರಿನ ಮಾಜಿ ಶಾಸಕರೂ, ಮಾಜಿ ಶಿಕ್ಷಣ ಸಚಿವರೂ ಆಗಿದ್ದ ಬಿ. ಸಿ. ನಾಗೇಶ್ ಅವರ ನಿಧನದ ಸುದ್ದಿ ತಿಳಿದು ತೀವ್ರ ಆಘಾತ ಹಾಗೂ ಅತೀವ ದುಃಖವಾಗಿದೆ.

​ಶಾಲೆಗಳಲ್ಲಿ “ವಿವೇಕ ಕೊಠಡಿ”ಗಳಂತಹ ಅದ್ಭುತ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಶ್ರೇಷ್ಠ ರಾಷ್ಟ್ರವಾದಿ ನಾಯಕ ಹಾಗೂ ನನಗೆ ಆತ್ಮೀಯರಾಗಿದ್ದ ಅವರ ಅಗಲಿಕೆ ನಾಡಿಗೆ ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

​ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಅಗಲಿಕೆಯ ಆಘಾತವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೂ ಹಾಗೂ ಅಪಾರ ಅಭಿಮಾನಿಗಳಿಗೂ ನೀಡಲಿ ಎಂದು ಪ್ರಾರ್ಥಿಸುತ್ತೇನೆ.​ಓಂ ಶಾಂತಿಃಎಂದು ಸಂಸದ
ರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಂಬನಿ ಮಿಡಿದಿದ್ದಾರೆ