ಪಣಜಿ: ಬಿಜೆಪಿ ಕಾರ್ಯಾಲಯವೆಂದರೆ ಛತ್ರಪತಿ ಶಿವಾಜಿ ಮಹಾರಾಜರ ಕೋಟೆಯಂತೆ ಇರುತ್ತದೆ ಈ ಕಾರ್ಯಾಲಯವು ಯಾವುದೇ ಸಂದರ್ಭದಲ್ಲಿ ಕಾರುಬಾರು ನಡೆಸಲು ಆಧಾರವಾಗುತ್ತದೆ. ಜನಸಾಮಾನ್ಯರಿಗೂ ಈ ಕಾರ್ಯಾಲಯವು ಇದು ನಮ್ಮ ಕಾರ್ಯಾಲಯ ಎಂದು ಅನ್ನಿಸುವಂತಿರುತ್ತದೆ. ಹೀಗೆ ಹಲವು ದೃಷ್ಠಿಯಲ್ಲಿ ಈ ಕಾರ್ಯಾಲಯ ಮಹತ್ವದ್ದಾಗಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನುಡಿದರು.
ಗೋವಾ ರಾಜಧಾನಿ ಪಣಜಿ ಸಮೀಪದ ಚಿಂಬಲ್ನಲ್ಲಿ ಬಿಜೆಪಿ ಕಾರ್ಯಾಲಯದ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ನಾನು ನಿಮ್ಮ ನೆರೆಯವನು. ಗೋವಾ ಮತ್ತು ಮಹಾರಾಷ್ಟ್ರ ಈ ಎರಡೂ ರಾಜ್ಯಗಳ ಉತ್ತಮ ಸಂಬಂಧವಿದೆ. ಈ ನೂತನ ಕಾರ್ಯಾಲಯವು ಮುಂದಿನ 50 ವರ್ಷಗಳಿಗಾಗಿ ಅಲ್ಲ, ಇನ್ನೂ ನೂರಾರು ವರ್ಷಗಳ ಕಾಲ ಉಳಿಯಲಿದೆ. ಈ ಐತಿಹಾಸಿಕ ಕ್ಷಣಕ್ಕೆ ನಾನು ಸಾಕ್ಷೀದಾರನಲ್ಲ ನಾನು ಭಾಗೀದಾರನಾಗಿದ್ದೇನೆ ಎಂದು ದೇವೇಂದ್ರ ಫಡ್ನವೀಸ್ ನುಡಿದರು.
ಕಾಂಗ್ರೇಸ್ ವಿರುದ್ಧ ವಾಗ್ದಾಳಿ ನಡೆಸಿದ ದೇವೇಂದ್ರ ಫಡ್ನವೀಸ್- ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೇಸ್ ಪಕ್ಷ ಜಮ್ಮೂ ಕಾಶ್ಮೀರದಲ್ಲಿ ಮಾತ್ರ ಸಂವಿಧಾನವನ್ನು ಮುಕ್ತಶಯಗೊಳಿಸುವ ಕೆಲಸ ಮಾಡುತ್ತಿದೆ. 370 ಕಲಂ ತೆಗೆದುಹಾಕುವ ಮಾತನಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ಕೇಂದ್ರ ಸಚಿವ ಶ್ರೀಪಾದ ನಾಯ್ಕ , ಸೇರಿದಂತೆ ಸಚಿವರು, ಶಾಸಕರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.