ಸುದ್ದಿ ಕನ್ನಡ ವಾರ್ತೆ

ಕಾರವಾರ:ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಹೋರಿ ಗುದ್ದಿ ಮಹಿಳೆ ಸಾವು ಕಂಡ ಘಟನೆ ನಡೆದಿದೆ.ಮಲ್ಲಾಪುರದ ರಾಜೇಶ್ವರಿ(29) ಹೋರಿ ಗುದ್ದಿ ಸಾವುಕಂಡ ಮೃತ ಮಹಿಳೆಯಾಗಿದ್ದಾಳೆ.

​​ಮಲ್ಲಾಪುರ ಗ್ರಾಮದ ಸುಭದ್ರ ಹೋಟೆಲ್ ಬಳಿ ಎರಡು ಗೂಳಿಗಳು ಗುದ್ದಾಟ ಮಾಡಿಕೊಂಡಿದ್ದು, ಇದೇ ಸ್ಥಳದಲ್ಲಿ ಕೆಲಸಕ್ಕೆ ಹೋಗಿ ಮನೆಗೆ ಬರುತ್ತಿದ್ದ ರಾಜೇಶ್ವರಿ ಮೇಲೆ ಹೋರಿಗಳು ಗುದ್ದಿ ಓಡಿದೆ.​ಹೋರಿ ಢಿಕ್ಕಿಯಾದ ರಭಸಕ್ಕೆ ಬಲವಾದ ಹೊಡೆತದಿಂದ ಕುಸಿದು ಬಿದ್ದ ರಾಜೇಶ್ವರಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸಿದ್ದು,ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ.

​​ಘಟನೆ ಸಂಬಂಧ ಮಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.