ಸುದ್ಧಿಕನ್ನಡ ವಾರ್ತೆ
ಪಣಜಿ: ನೈಯಭಾಗ್ ನಿಂದ ಪತ್ರಾದೇವಿ ಕಡೆಗೆ ಹೋಗುತ್ತಿರುವ ಕರ್ನಾಟಕ ನೋಂದಣಿ ಹೊಂದಿದ್ದ ಕಾರೊಂದು ಉಗಾವೆ ಎಂಬಲ್ಲಿ ಪ್ರಪಾತಕ್ಕೆ ಬಿದ್ದು ಚಾಲಕ ಸೇರಿದಂತೆ ಆರು ಜನರು ಗಾಯಗೊಂಡ ಘಟನೆ ನಡೆದಿದೆ.

ಕೆಎ-49, ಎನ್-2005 ನೋಂದಣಿ ಹೊಂದಿರುವ ವಾಹನವು ಉಗಾವೆ ಎಂಬಲ್ಲಿ ಭಾರಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ಪ್ರತ್ಯಕ್ಷ ದರ್ಶಿಗಳ ಪ್ರಕಾರ ಈ ಕಾರು ಬಾರಿ ವೇಗವಾಗಿ ಬರುತ್ತಿತ್ತು ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕಕ್ಕೆ ಬಿದ್ದಿದೆ ಎನ್ನಲಾಗಿದೆ.

ಗಾಯಾಳುಗಳನ್ನು ಕರ್ನಾಟಕದ ನಿಪ್ಪಾಣಿ ಮೂಲದ ಚಾಲಕ ರೋಷನ್(21), ಪ್ರಯಾಣಿಕರಾದ ಪ್ರಥಮ ಚಂದೂರ್ಕರ್, ಪ್ರಥಮೇಶ ಮನ್ಸುಲೆ, ಪ್ರತಿಕ್ ಗೋಲೆಕರ್, ಗೌರೀಶ್ ಅಂಕುಶ್, ಶುಭಮ್ ಎಂದು ಗುರುತಿಸಲಾಗಿದೆ.

ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.