ಸುದ್ದಿ ಕನ್ನಡ ವಾರ್ತೆ

ಜೋಯಿಡಾ ಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಮೇಟ್ರಿಕ್ ನಂತರದ ಬಾಲಕರ ವಸತಿ ನಿಲಯ ಶೀಘ್ರ ಆರಂಭಿಸುವ ಕುರಿತು ಕಾಳಿ ಬ್ರಿಗೇಡ್ ಸಂಘಟನೆ ಮನವಿ ನೀಡಿದೆ.

ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗೆ ನೀಡಿದ ಮನವಿಯಲ್ಲಿ, ಕಾಳಿ ಬ್ರಿಗೇಡ್ ಜೋಯಿಡಾ ತಾಲೂಕಿನ ವಿವಿಧ ಸಮಸ್ಯೆಗಳ ನಿವಾರಣೆಗಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದು, ಭೃಷ್ಟಾಚಾರ ನಿರ್ಮೂಲನೆ, ಅನ್ಯಾಯಕ್ಕೆ ಒಳಗಾದ ಜನರ ರಕ್ಷಣೆ, ಜನ ವಿರೋಧಿ ನೀತಿಗಳ ವಿರುದ್ಧ ಜಾಗೃತಿ, ಕಾನೂನು ಸಾಕ್ಷರತೆ, ಇಲಾಖೆಗಳ ಅರಣ್ಯ ಲೂಟಿಗೆ ನಿಯಂತ್ರಣ, ವನ್ಯ ಜೀವಿ ಮತ್ತು ಸಂಪತ್ತಿನ ರಕ್ಷಣೆ, ಸರ್ಕಾರಿ ಯೋಜನೆಗಳ ಮಾಹಿತಿ, ಅತಿಕ್ರಮಣ ಸಕ್ರಮಕ್ಕಾಗಿ ಹೋರಾಟ, ನಿರಾಶ್ರೀತರ ಸಮಸ್ಯೆ ಹೀಗೆ ಹತ್ತು ಹಲವು ವಿಷಯಗಳ ಕುರಿತು ಪಕ್ಷಾತೀತವಾಗಿ ಕೆಲಸ ಮಾಡುತ್ತಾ ಬಂದಿದೆ.

 

ಈ ಕಾರ್ಯಗಳಿಗೆ ಇಲ್ಲಿನ ಸಾವಿರಾರು ಸಾರ್ವಜನಿಕರು, ಕಾರ್ಯಕರ್ತರು ಬೆಂಬಲ ನೀಡುತ್ತಾ ಬಂದಿರುತ್ತಾರೆ. ಅಲ್ಲದೇ, ತಾಲೂಕಿನ ಸಂಘ – ಸಂಸ್ಥೆಗಳು, ರಾಜಕೀಯ ಪಕ್ಷಗಳು, ಜನ ಪ್ರತಿನಿಧಿಗಳು, ಎಲ್ಲಾ ಜಾತಿ, ಧರ್ಮ, ಸಮಾಜದವರು, ಒಂದಾಗಿ ನಾವು ಜೋಯಿಡಾ ತಾಲೂಕಿನ ಅಭಿವೃದ್ಧಿ ಮತ್ತು ಉಳಿವಿಗಾಗಿ ‘ಕಾಳಿ ಬ್ರಿಗೇಡ್’ ನೇತೃತ್ವದಲ್ಲಿ ಹೋರಾಟ ಮಾಡುತ್ತಾ ಬಂದಿರುತ್ತೇವೆ.

ಜೋಯಿಡಾ ಗ್ರಾಮಕ್ಕೆ ಶೀಘ್ರ ಮೇಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಆಂಭಿಸಿ: ಜೋಯಿಡಾ ತಾಲೂಕು ಭೂ ಪ್ರದೇಶದಲ್ಲಿ ರಾಜ್ಯದಲ್ಲೇ ಅತೀ ವಿಸ್ತಾರವಾದ ತಾಲೂಕಾಗಿದೆ. ಇಲ್ಲಿಯ ಜನರಿಗೆ ಸಾರಿಗೆ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಆದರೂ ತಾಲೂಕು ನಿಧಾನಗತಿಯಲ್ಲಿ ಅಭಿವೃದ್ಧಿ ಹೋಂದುತ್ತಿದೆ. ಇದಕ್ಕೆ ಸದರಿ ಇಲಾಖೆಯ ಅಧಿಕಾರಿಗಳ ಸತತ ಪ್ರಯತ್ನವು ಕಾರಣ. ಜೋಯಿಡಾದ ಸೂತ್ತಮೂತ್ತಲಿನ ಭಾಗಗಳಲ್ಲಿ ಸಾಮಾನ್ಯ ಬಡ ವರ್ಗದವರು ಮತ್ತು ಹಿಂದುಳಿದ ವರ್ಗದ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು, ಅವರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಜೋಯಿಡಾದಲ್ಲಿ ಪಿ.ಯು.ಸಿ, ಡಿಪ್ಲೋಮಾ, ಡಿಗ್ರಿ ಕಾಲೇಜಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಅವುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಜೋಯಿಡಾದಲ್ಲಿ ಮೇಟ್ರಿಕ ನಂತರದ ಬಾಲಕರ ವಸತಿ ನಿಲಯ ಇಲ್ಲದೇ ಇರುವುದರಿಂದ ಅವರು ಸದ್ರಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

 

ಹಲವು ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆ ಸರಿಯಾಗಿ ಇಲ್ಲದೇ ಇರುವುದರಿಂದ ಕಾಲೇಜಿಗೆ ಸರಿಯಾದ ಸಮಯಕ್ಕೆ ಬರಲು ಮತ್ತು ಮರಳಿ ಮನೆಗೆ ಹೋಗಲು ಆಗುತ್ತಿಲ್ಲ. ಜೋಯಿಡಾದಲ್ಲಿ ಭಾಡಿಗೆ ಮನೆ ಮಾಡಿ ವಿದ್ಯಾಭ್ಯಾಸ ಮಾಡುವಷ್ಟು ಅವರು ಆರ್ಥಿಕವಾಗಿ ಸಬಲರಾಗಿಲ್ಲ. ಇದರಿಂದಾಗಿ ಹಲವರು ತಮ್ಮ ಶಿಕ್ಷಣ ಅರ್ಧಕ್ಕೆ ನಿಲ್ಲಿಸುತ್ತಿದ್ದಾರೆ. ಅದಕ್ಕಾಗಿ ಇಲ್ಲಿ ತುರ್ತಾಗಿ ಒಂದು ಹಿಂದುಳಿದ ವರ್ಗಗಳ ಮೇಟ್ರಿಕ ನಂತರದ ಬಾಲಕರ ವಸತಿ ನಿಲಯದ ಅವಶ್ಯಕತೆಯಿದೆ. ಜೋಯಿಡಾ ಎಲ್ಲಾ ದೃಷ್ಟಿಯಿಂದಲೂ ಮೇಟ್ರಿಕ ನಂತರದ ಬಾಲಕರ ವಸತಿ ನಿಲಯ ಹೋಂದಲು ಅರ್ಹವಾಗಿದೆ. ಅದಕ್ಕಾಗಿ ಜೋಯಿಡಾದ ತಾಲೂಕಾ ಕೇಂದ್ರದ ನಗರೀಕರಣದಲ್ಲಿ ಸ್ಥಳಾವಕಾಶವು ಲಭ್ಯ ಇರುತ್ತದೆ. ಈ ಬಗ್ಗೆ ಶಾಸಕರಾದ ಆರ್.ವಿ. ದೇಶಪಾಂಡೆ ಅವರು, ಕಳೆದ ವರ್ಷ ಬೆಂಗಳೂರಿನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತುಕತೆ ಮಾಡಿದ್ದು, ಶೀಘ್ರದಲ್ಲಿ ವಸತಿ ನಿಲಯ ಆರಂಭಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಇನ್ನೂ ವರೆಗೂ ವಸತಿ ನಿಲಯ ಆರಂಭವಾಗಿದ್ದು ಇರುದಿಲ್ಲ. ಕಾರಣ ಈ ಬಗ್ಗೆ ಶೀಘ್ರ ಕ್ರಮ ಜರುಗಿಸಬೇಕಾಗಿ ಆಗ್ರಹಿಸಿದೆ.

 

ಕಾರಣ ಸದ್ರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಜೋಯಿಡಾ ಗ್ರಾಮಕ್ಕೆ ಒಂದು ತುರ್ತಾಗಿ ಹಿಂದುಳಿದ ವರ್ಗಗಳ ಮೇಟ್ರಿಕ ನಂತರದ ಬಾಲಕರ ವಸತಿ ನಿಲಯ ಶೀಘ್ರ ಆರಂಭಿಸಬೇಕಾಗಿ ತಾಲೂಕಿನ ಜನರ ಪರವಾಗಿ ಸುನೀಲ್ ದೇಸಾಯಿ ಸಂಘಟನೆಯ ಪರವಾಗಿ ವಿನಂತಿಸಿ ಕೊಂಡಿದ್ದಾರೆ