Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ನಿನ್ನೆ ಕೊಪ್ಪಳ ದಲ್ಲಿ ನಡೆಯಿತು.

Banner Ad

ಈ ಉತ್ಸವ ದಲ್ಲಿಜೋಯಿಡಾ ದ ಶ್ರೀ ರಾಮ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಶ್ರಾವಣಿ ಮಹೇಂದ್ರ ಹರ್ಚಿರ್ಕರ ಭಾಗವಹಿಸಿ ಗಜಲ್ ನಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿದ್ದಾಳೆ. ರಾಷ್ಟ್ರಮಟ್ಟಕ್ಕೆ ಆಯ್ಕೆ ಯಾಗುವ ಮೂಲಕ ಹಿಂದುಳಿದ ಜೋಯಿಡಾ ತಾಲೂಕನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಲಿದ್ದಾಳೆ. ಇದು ತುಂಬಾ ಸಂತಸ ವನ್ನು ಜೋಯಿಡಾ ದ ಜನತೆಗೆ ತಂದಿದೆ. ಶ್ರಾವಣಿ ಯು ಗಜಲ್ ನಲ್ಲಿ ಪ್ರಥಮ ಮತ್ತು ಬಾವಗೀತೆ ಯಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾಳೆ. ಪ್ರೌಢ ಶಾಲೆಯ ಶಿಕ್ಷಕರ ವೃಂದ, ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು, ಹೆತ್ತವರು ಶ್ರಾವಣಿ ಯನ್ನು ಅಭಿನಂದಿಸಿದ್ದಾರೆ.

Banner Ad