ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ನಿನ್ನೆ ಬಸ್ ಸಿಲುಕಿ ಹೇಗೋ ಬಸ್ ತೆಗೆದ ದೇವುಳ್ಳಿ ಯ ಜೋಯಿಡಾ ಕಾರವಾರ ರಸ್ತೆ ಮೇಲೆ ಸೋಮವಾರ ಬೆಳಿಗ್ಗೆ ಅದೇ ಮಾರ್ಗ ದಲ್ಲಿ ಹೋಗುತ್ತಿದ್ದ ತರಕಾರಿ ಟ್ರಕ್ ಸಿಕ್ಕಿ ಹಾಕಿ ಕೊಂಡು ಬೀಳುವ ಸ್ಥಿತಿಯಲ್ಲಿದೆ.
ಇದು ಕಾರವಾರ ಬೆಳಗಾವಿ ಮುಖ್ಯ ರಸ್ತೆ ಯಾಗಿದ್ದು ಈ ರಸ್ತೆ ಹಾಳಾದರೆ ದಾಂಡೇಲಿ ಜೋಯಿಡಾ ಬೆಳಗಾವಿ ಯಿಂದ ಬರುವ ವಾಹನ ಗಳಿಗೆ ಕಾರವಾರ ಸಂಪರ್ಕ ಕಡಿದು ಹೋಗುತ್ತದೆ. ಹಾಗಾಗಿ ಲೋಕೋಪಯೋಗಿ ಇಲಾಖೆ ಸಮರೋಪಾಧಿಯಲ್ಲಿ ರಸ್ತೆ ಸರಿಪಡಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಇದೇ ರಸ್ತೆಯಲ್ಲಿ ಹಗಲು ರಾತ್ರಿ ಎನ್ನದೇ ಕೈಗಾಕ್ಕೆ ಕಲ್ಲು ಖಡಿ ಒಯ್ಯುವ ಬ್ರಹತ್ ಟ್ರಕ್ ಗಳಲ್ಲಿ ಸಾಮಗ್ರಿಗಳನ್ನು ತರಿಸಿ ಕೊಂಡು ಒಂದೇ ದಿನದಲ್ಲಿ ಗಟ್ಟಿಮುಟ್ಟಾದ ರಸ್ತೆ ಮಾಡಿಸಿ ಕೊಳ್ಳಬಹುದು.
ಜೋಯಿಡಾ ತಾಲೂಕಿನ ರಸ್ತೆ ಗಳು ಮಳೆಗಾಲ ಬಂದೊಡನೆ ಮೆತ್ತಗಾಗುತ್ತವೆ,ಇದಕ್ಕೆ ಹಲವಾರು ಕಾರಣ ಗಳಿರಬಹುದು ಆದರೆ ಕೆಲಸ ಗುಣಮಟ್ಟ ದಿಂದ ಕೂಡಿದರೆ, ಈ ರೀತಿ ಆಗೋದಿಲ್ಲ ಎನ್ನುವುದು ಎoತವರಿಗಾದರೂ ತಿಳಿಯುತ್ತದೆ ಎನ್ನುವುದು ಜನರ ಅಭಿಪ್ರಾಯ ವಾಗಿದೆ. ತಾಲೂಕಿನಲ್ಲಿ ಎಲ್ಲೇ ರಸ್ತೆ ಸೇತುವೆ ಕಟ್ಟಡ ಗಳು ನಿರ್ಮಾಣ ವಾದರೂ ಅವುಗಳ ಗುಣಮಟ್ಟ ದೇವರಿಗೇ ಪ್ರೀತಿ ಎನ್ನುವಂತೆ ಆಗುತ್ತಿವೆ, ಹಾಗಾಗಿ ತಾಲೂಕಿನ ಯಾವ ಗುತ್ತಿಗೆ ದಾರರೂ ಉತ್ತಮ ಗುತ್ತಿಗೆ ದಾರ ಎಂಬ ಬಿರುದು ಪಡೆದು ಕೊಂಡ ದಾಖಲೆ ಗಳಿಲ್ಲ.ಇದು ನಿಜವಾಗಿ ಬೇಸರದ ವಿಚಾರ. ಇದಕ್ಕೆಲ್ಲ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿದಿ ಗಳು, ಗಟ್ಟಿ ಮನಸ್ಸು ಮಾಡಬೇಕು. ಅಂದರೆ ರಸ್ತೆ ಸೇತುವೆ ಗಳು ಗಟ್ಟಿಮುಟ್ಟಾಗಿ ಜನ ಸೇವೆಗೆ ಸಿಗುತ್ತವೆ. ಜೊತೆಗೆ ಕೆಲಸ ಗಳು ಹೇಗೆ ನಡೆಯುತ್ತಿವೆ ಎಂದು ನೋಡಿ ಕಳಪೆ ಯಾದರೆ ಸಂಬಂಧ ಪಟ್ಟವರಿಗೆ ತಿಳಿಸಬೇಕು, ಕೇವಲ ಚುನಾವಣೆ ಸಮಯದಲ್ಲಿ ಮತಕೇಳಿ, ನಂತರ ನಾನು ನೀನು ಜೋಡಿ ಎಂದರೆ ತಾಲೂಕಿಗೆ ಇದೇ ಗತಿ ಎನ್ನುವ ಮಾತುಗಳು ಕೇಳಿ ಬಂದಿವೆ.
ಈ ಎರಡು ನೂರು ಮೀಟರ್ ರಸ್ತೆ ಕೆಲಸಕ್ಕೆ ಕಳೆದ ಸುಮಾರು 8ವರ್ಷ ಗಳ ಅವಧಿಯಲ್ಲಿ ಅಂದಾಜುರೂಪಾಯಿ ಒಂದು ಕೋಟಿ ಹತ್ತಿರ ಖರ್ಚು ತೋರಿಸಲಾಗಿದೆ ಎಂದು ತಿಳುದು ಬಂದಿದೆ, ಹಾಗಾಗಿ ಯಾವ ಗುತ್ತಿಗೆ ದಾರ ಎಷ್ಟು ಹಣ ಪಡೆದರು ಅವರಿಂದಲೇ ಈ ಕೆಲಸ ಸರಿಪಡಿಸಿಕೊಳ್ಳಬೇಕು, ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
