ಸುದ್ದಿ ಕನ್ನಡ ವಾರ್ತೆ
ಜೊಯಿಡಾ ತಾಲೂಕಿನ ಬಾಜರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರಂತರ ಮಳೆ ಕಾರಣ ಕಿರವತ್ತಿ- ಡಿಗ್ಗಿ – ಗೋವಾ ಗಡಿ SH 146 ರಸ್ತೆಗೆ ಹೊಂಡ, ಗಿಡ, ನೀರು ಹರಿದು ಹಾಗೂ ಕೆಸರಿನಿಂದ ಸಂಚಾರಕ್ಕೆ ತೊಂದರೆ ಯಾಗಿದೆ. ದ್ವಿಚಕ್ರ ವಾಹನ ಸವಾರ ಹಾಗೂ ಗ್ರಾಮಸ್ಥರಿಗೆ ಅಗತ್ಯ ಸೇವೆಗಳ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಯಾಗುತ್ತಿದೆ, ಕೆಲವೆಡೆ ವಾಹನಗಳು ಕೆಸರಿನಲ್ಲಿ ಸಿಲುಕಿದ ಘಟನೆಗಳು ನಡೆಯುತ್ತಿವೆ ಅಪಘಾತ ಸಂಭವಿಸುವ ಭೀತಿ ಹೆಚ್ಚಾಗಿವೆ ಎಂದು ಬಜಾರ್ ಕುಣಂಗ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಜಿತ್ ಮಿರಾಶಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯು ದುಧಮಳಾ, ಡಿಗ್ಗಿ, ಬೊಂಡೇಲಿ, ಸಿಸೈ, ಕಡ್ನೆ, ಮಾಹರೆ, ಕಾರಂಜೆ ಮತ್ತು ಪಾದಸೇತ ಮುಂತಾದ ಹಳ್ಳಿಗಳಿಗೆ ಸಂಚರಿಸುವ ಮುಖ್ಯ ರಸ್ತೆಯಾಗಿದ್ದು ಪ್ರತಿ ವರ್ಷ ಮಳೆಗಾಲ ಪ್ರಾರಂಭ ಆದಾಗ ಈ ರಸ್ತೆಯು ಹಾಳಾಗುತ್ತಿರುವುದರಿಂದ ಜನ ಸಂಚರಿಸಲು ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ.
ಮೂಲಭೂತ ಸೌಲಭ್ಯಗಳಿಂದ ವಂಚಿತ ಬಾಜಾರಕುಣಂಗ ಪಂಚಾಯತಿಯ ಗ್ರಾಮಸ್ಥರಿಗೆ ಸಂಚರಿಸಲು ಒಂದು ರಸ್ತೆ ಇಲ್ಲಾ.
ತಕ್ಷಣ ದುರಸ್ತಿ ಕಾರ್ಯ ಆಗಬೇಕು :- ಸಾರ್ವಜನಿಕರ ಸುರಕ್ಷತೆ ಕ್ರಮವಾಗಿ ಲೋಕೋಪಯೋಗಿ ಇಲಾಖೆಯವರು ಮಳೆ ಮುಗಿಯುವರೆಗೆ ಕಾಯದೆ ತುರ್ತು ದುರಸ್ತಿ ಕಾರ್ಯ ನಡೆಸಬೇಕು.
ಲಕ್ಷಾಂತರ ರುಪಾಯಿ ಖರ್ಚು:- ಈ ರಸ್ತೆಯು ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಯು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುತ್ತಿದ್ದು ರಸ್ತೆ ದುರಸ್ತಿ ಯಾಗದೆ ಕೇವಲ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಜೇಬು ತುಂಬಿದೆ ತೊಂದರೆ ಮಾತ್ರ ಗ್ರಾಮಸ್ಥರು ಅನುಭವಿಸುತ್ತಿದ್ದಾರೆ.
ಅಜಿತ ಮಿರಾಶಿ ಮಾಜಿ ಉಪಾಧ್ಯಕ್ಷ ಗ್ರಾಮ ಪಂಚಾಯತ್ ಬಾಜಾರಕುಣಂಗ :- ಸಾರ್ವಜನಿಕರು ನಿತ್ಯ ಜೀವದ ಹಂಗು ತೊಟ್ಟು ಸಂಚರಿಸುವ ಪರಿಸ್ಥಿತಿ ನಿರ್ಮಾಣ ವಾಗಿದೆ, ಲೋಕೋಪಯೋಗಿ ಇಲಾಖೆ ಪ್ರತಿ ವರ್ಷ ಈ ರಸ್ತೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ ಆದರೆ ರಸ್ತೆ ಮಾತ್ರ ಸರಿಪಡಿಸಿದ್ದು ಇರುವುದಿಲ್ಲ ತಾಲೂಕಾ ಆಡಳಿತ ತಕ್ಷಣ ದುರಸ್ತಿ ಕಾರ್ಯ ಕೈಗೊಂಡು ಜನರ ಸಂಕಷ್ಟಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
