ಸುದ್ದಿ ಕನ್ನಡ ವಾರ್ತೆ
ಜೊಯಿಡಾ ದ ದೇವುಳ್ಳಿ ಹತ್ತಿರ ನಿರ್ಮಿಸಿದ ರಸ್ತೆ ಕುಸಿದು ಸಾರಿಗೆ ಬಸ್ ರಸ್ತೆಯಲ್ಲಿ ಸಿಕ್ಕಿ ಹಾಕಿಕೊಂಡು ಅವಾಂತರ ಸೃಷ್ಟಿಯಾಗಿದೆ. ತಾಲೂಕಿನ ಸುಪಾ ಜಲಾಶಯ ಭಾಗದಲ್ಲಿ ಮಳೆ ಜೋರಾಗಿ ಬೀಳುತ್ತಿದೆ. ಇದರಿಂದಾಗಿ ಅಣಶಿ , ಕುಂಬಾರವಾಡ, ಬಜಾರ ಕುಣಂಗ, ರಾಮನಗರ ಕ್ಯಾಸ್ಟಲ್ ರಾಕ್ ಅನಮೋಡ ಭಾಗದಲ್ಲಿ ಮಳೆ ಚೆನ್ನಾಗಿ ಬೀಳುತ್ತಿದೆ.
ಅಲ್ಲದೆ ರಸ್ತೆಯ ಗಟಾರಗಳನ್ನು ಸಂಬಂಧ ಪಟ್ಟ ಇಲಾಖೆಯವರಾಗಲೀ, ಸಂಬಂಧಪಟ್ಟ ಏರಿಯಾ ದ ಗ್ರಾಮ ಪಂಚಾಯತವಾಗಲಿ ರಿಪೇರಿ ಮಾಡದ ಕಾರಣ ರಸ್ತೆ ತುಂಬಿ ನೀರು ಹರಿಯುತ್ತಿದೆ. ಇದರಿಂದ ರಸ್ತೆಯಲ್ಲಿ ಓಡಾಡುವ ವಾಹನಗಳು ಎದುರು ಬಂದು ಮತ್ತೊಂದು ವಾಹನಕ್ಕೆ ದಾರಿ ಕೊಡುವ ವೇಳೆ ಕೆಸರಲ್ಲಿ ಸಿಕ್ಕಿ ಹಾಕಿ ಕೊಳ್ಳುತ್ತಿವೆ.

ಅದೇ ರೀತಿ ಇಂದು ಮಧ್ಯಾನ್ಹದ ಮೇಲೆ ಉಳವಿ ಬಸ್ ದೇವುಳ್ಳಿ ಹತ್ತಿರ ಕೆಸರಲ್ಲಿ ಸಿಕ್ಕಿ ಹಾಕಿಕೊಂಡಿದೆ. ಈ ಬಸ್ ಅನ್ನು ತೆಗೆಯದೆ ದೊಡ್ಡ ವಾಹನಗಳಾಗಲಿ , ಬಸ್ ಗಳಾಗಲಿ ಓಡಾಡಲು ತೊಂದರೆಯಾಗಿದೆ. ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಗಮನ ಹರಿಸಿದ್ದು ತಿಳಿದುಬಂದಿದೆ.ಕಂದಾಯ ಇಲಾಖೆಯ ಉಪ ತಹಸೀಲ್ದಾರ್ ಗಣಪತಿ ಮೇತ್ರಿ ಅವರು ಸ್ಥಳದಲ್ಲಿದ್ದು ಅಗತ್ಯ ಕ್ರಮ ಕೈ ಕೊಳ್ಳುತ್ತಿದ್ದಾರೆ.
