ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಹೊರ ರಾಜ್ಯದ ಜನರಿಂದ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಖರೀದಿಯಾಗುತ್ತಿದೆ. ಇದನ್ನು ತಡೆಯಲು ಗೋವಾದ ಸತ್ತರಿ ತಾಲೂನಿಕ ಅಡ್ವಾಯಿ ಗ್ರಾಮಸ್ಥರು ಭಾನುವಾರ ಶ್ರೀ ಶಾಂತಾದುರ್ಗಾ ದೇವಸ್ಥಾನದಲ್ಲಿ ಸಭೆ ನಡೆಸಿ ಈ ಒಟ್ಟೂ ಐದು ಹಳ್ಳಿಯಯ ಜನರು ಯಾವುದೇ ಕಾರಣಕ್ಕೂ ಹೊರ ರಾಜ್ಯದ ಜನರಿಗೆ ಭೂಮಿ ಮಾರಾಟ ಮಾಡುವುದಿಲ್ಲ ಎಂಬ ಒಂದು ಪ್ರಮುಖ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಈ ಐದು ಊರುಗಳಲ್ಲಿ ಹೊರ ರಾಜ್ಯದ ಜನರಿಗೆ ಪ್ರವೇಶವಿಲ್ಲದಂತಾಗಿದೆ.Land will not be sold to people outside the state.
ತಮ್ಮ ಗ್ರಾಮದ ಮೂಲ ಗುರುತು, ಸಾಂಪ್ರದಾಯಿಕ ಸಂಸ್ಕøತಿ, ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಈ ಐದು ಗ್ರಾಮದಲ್ಲಿ ಒಂದು ಇಂಚು ಭೂಮಿಯನ್ನೂ ವಲಸಿಗರಿಗೆ ಅಂದರೆ ಹೊರ ರಾಜ್ಯದ ಜನರಿಗೆ ನೀಡುವುದಿಲ್ಲ ಎಂದು ನಿರ್ಣಯ ತೆಗೆದುಕೊಂಡಿದ್ದಾರೆ.
ಈ ಗ್ರಾಮಗಳಲ್ಲಿ ಯಾರಿಗಾದರೂ ಅನಿವಾರ್ಯವಾಗಿ ಭೂಮಿಯನ್ನು ಮಾರಾಟ ಮಾಡುವ ಸಂದರ್ಭ ಬಂದರೆ ಗ್ರಾಮದೊಗಳಿನ ಜನರಿಗೆ ಅಥವಾ ಅವರ ಸಂಬಂಧಿಕರಿಗೆ ಮಾತ್ರ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಅಪರಿಚಿತರಿಗೆ ಅಥವಾ ಹೊರ ರಾಜ್ಯದ ಜನರಿಗೆ ಮಾರಾಟ ಮಾಡುವುದಿಲ್ಲ ಎಂದು ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಎಲ್ಲರೂ ಸಮ್ಮತಿ ಸೂಚಿಸಿದರು.
