ಸುದ್ದಿ ಕನ್ನಡ ವಾರ್ತೆ
​ಯಲ್ಲಾಪುರ:ತಾಲೂಕಿನ ಚಂದಗುಳಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ (ಗಂಟೆ ಗಣಪತಿ ದೇವಸ್ಥಾನ) ಚಾತುರ್ಮಾಸ್ಯ ವ್ರತ ಆಚರಿಸುತ್ತಿರುವ ತುರುವೇಕೆರೆಯ ಶ್ರೀ ಪ್ರಣವಾನಂದ ಸ್ವಾಮಿಗಳ ನಿರ್ದೇಶನದಂತೆ ಅಥರ್ವಶೀರ್ಷ ಪಾರಾಯಣ ಆರಂಭಗೊಂಡಿತು.

​ಗ್ರಾಮಸ್ಥರು, ಭಕ್ತರು ಶ್ರೀಗಳ ಸಮ್ಮುಖದಲ್ಲಿ ಸಂಕಲ್ಪದೊಂದಿಗೆ ಅಥರ್ವಶೀರ್ಷ ಪಾರಾಯಣ ನಡೆಸಿದರು. ಪ್ರತಿ ಶನಿವಾರ ದೇವರ ಸನ್ನಿಧಿಯಲ್ಲಿ ಪಾರಾಯಣ ನಡೆಯಲಿದ್ದು, ದೇವಸ್ಥಾನಕ್ಕೆ ಬರಲು ಸಾಧ್ಯವಾಗದಿದ್ದವರು ಮನೆಯಲ್ಲಿಯೇ ಪಾರಾಯಣ ಮಾಡುವ ಮೂಲಕವೂ ಈ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ನೀಡಲಾಗಿದೆ.

ಸೋಂದಾ ಸ್ವರ್ಣವಲ್ಲಿ ಶ್ರೀ ಗಳ ಆಶಯದಂತೆ ಲೋಕ ಕಲ್ಯಾಣಾರ್ಥವಾಗಿ ಹಾಗೂ ಅಡಕೆ ಬೆಳೆಗೆ ವ್ಯಾಪಿಸಿರುವ ಎಲೆಚುಕ್ಕೆ ರೋಗದ ನಿವಾರಣೆಗಾಗಿ ಪ್ರಾರ್ಥಿಸಿ 21 ಸಾವಿರ ಅಥರ್ವಶೀರ್ಷ ಪಾರಾಯಣ ಚಾತುರ್ಮಾಸ್ಯದ ಅವಧಿಯಲ್ಲಿ ನಡೆಯಲಿದೆ. ಪಾರಾಯಣದ ಸಮೃದ್ಧಿಗೋಸ್ಕರ ಚಾತುರ್ಮಾಸ್ಯ ಮುಗಿದ ನಂತರ ಸೆ.29 ರಂದು ಅಂಗಾರಕ ಸಂಕಷ್ಟಿಯ ದಿನ ಅಥರ್ವಶೀರ್ಷ ಹವನ ನಡೆಯಲಿದೆ.