ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದ ಉಳವಿ ಯಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ,ಹಾಗೂ ಟಾಟಾ ಹಿಟಾಚಿ ಮಷಿನರಿ ಪ್ರೈವೇಟ್ ಲಿಮಿಟೆಡ್, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಹತ್ತು ದಿನಗಳ ಕಾಲ ಆಯೋಜಿಸಲಾದ ಫ್ಯಾಷನ್ ಬ್ಲೌಸ್ ಡಿಸೈನ್ ತರಬೇತಿ ಉಚಿತ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ವನ್ನು ಉಳಿವಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಟಾಟಾ ಹಿಟಾಚಿ ಮಷಿನರಿ ಪ್ರೈವೇಟ್ ಲಿಮಿಟೆಡ್, ಧಾರವಾಡದ ಡಿಜಿಎಂ ಪ್ರಶಾಂತ ದೀಕ್ಷಿತ್ ಅವರು ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಅವರು ಮಾತನಾಡಿ, ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲರಾಗಲು ಇಂತಹ ಕೌಶಲ್ಯಾಭಿವೃದ್ಧಿ ತರಬೇತಿಗಳು ಅತ್ಯಂತ ಉಪಯುಕ್ತವಾಗಿವೆ ಇಂತವುಗಳಿಂದ ನಿಮ್ಮ ವ್ಯವಹಾರ ವೃದ್ಧಿಸಿ ಕೊಳ್ಳಿ ಎಂದು ತಿಳಿಸಿದರು. ಫ್ಯಾಶನ್ ಬ್ಲೌಸ್ ವಿನ್ಯಾಸ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿದ್ದು, ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಸ್ವಂತ ಉದ್ಯಮ ಆರಂಭಿಸುವಂತೆ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ಶಂಕರಯ್ಯ್ ಶಾಸ್ತ್ರಿಜಿ ಶಿಬಿರಾರ್ಥಿಗಳ ಕುರಿತು ಮಾತನಾಡಿ ಇಂತ ಕಾರ್ಯಕ್ರಮ ಗಳ ಸದುಪಯೋಗ ಪಡೆದುಕೊಳ್ಳಿ ಎಂದರು.

 

ಹತ್ತು ದಿನಗಳ ತರಬೇತಿಯಲ್ಲಿ ಶಿಬಿರಾರ್ಥಿಗಳಿಗೆ ಆಧುನಿಕ ಫ್ಯಾಶನ್ ಬ್ಲೌಸ್ ವಿನ್ಯಾಸ, ಕಟಿಂಗ್, ಹೊಲಿಗೆ ಹಾಗೂ ವಿವಿಧ ಮಾದರಿಗಳ ತಯಾರಿಕೆ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ತರಬೇತಿಯ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು, ಸ್ವಾವಲಂಬಿ ಜೀವನ ನಡೆಸಲು ಪ್ರೇರಣೆ ದೊರೆಯಿತು ಎಂದು ಶಿಬಿರಾರ್ತಿ ಗಳು ಹೇಳಿದರು.

ಕಾರ್ಯಕ್ರಮದಲ್ಲಿ ಕಿರಣಕುಮಾರ್ ಬಾಗಡೆ, ನಿರ್ದೇಶಕ   ಕೆನರಾ ಬ್ಯಾಂಕ್ ದೇಶಪಾಂಡೆ ಅವರು ಆರ್ಸೆಟ್ ಸಂಸ್ಥೆ ಹಳಿಯಾಳ ದ ಲ್ಲಿ ಸಿಗುವ ತರಬೇತಿಗಳ ಕುರಿತು ಮಾಹಿತಿ ನೀಡಿದರು ವೇದಿಕೆ ಯಲ್ಲಿ ಗಂಗಾಧರ ನಾವಲಗಿ ಆಡಳಿತಾ ಅಧಿಕಾರಿಗಳು ಟಾಟಾ ಹಿಟಾಚಿ ಧಾರವಾಡ,ಹಾಲಪ್ಪ ಚಕ್ರಸಾಲಿ, ರಮೇಶ್ ಪಡಸಲಗಿ, ಶ್ರೀಮತಿ ಕಲಾವತಿ ಇಂಗಳಗಿ ,ಪದ್ಮಾವತಿ ಇಟಗಿ ಮಂಜುಳ ವಸ್ತ್ರದ್ ಉಪಸ್ಥರಿದ್ದರು ಅಶೋಕ್ ಸೂರ್ಯವಂಶ ಆಯೋಜಿಸಿದ್ದರು ಕಾರ್ಯಕ್ರಮ ದಲ್ಲಿ 33 ಶಿಬಿರಾರ್ಥಿಗಳು ಪ್ರಮಾಣ ಪತ್ರ ಪಡೆದುಕೊಂಡರು.