ಸುದ್ದಿ ಕನ್ನಡ ವಾರ್ತೆ
ರಾಮನಗರದ ಬಿಜಿವಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಮತ್ತು ಸಾಂಸ್ಕೃತಿಕ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮಕ್ಕೆ ದ್ವೀಪ ಬೆಳಗಿಸಿ ಮುಖ್ಯ ಅತಿಥಿಯಾದ ಉದ್ಯಮಿ ಆಕಾಶ್ ಗಾವಲ್ಕರ್ ಇವರು ಚಾಲನೆ ನೀಡಿದರು ಅವರು ಕಾಲೇಜಿನ ಅಭಿವೃದ್ಧಿಗೆ ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.
ಕಿತ್ತೂರ್ ರಾಣಿ ಚೆನ್ನಮ್ಮ ಮುಖ್ಯೋಪಾಧ್ಯಾಪಕರು ಬಸವರಾಜ್ ಮಲ್ಲುರು ಇವರು ವಿದ್ಯಾರ್ಥಿಗಳನ್ನು ಉಪದೇಶಿಸಿ ಮಾತನಾಡಿದರು ಸಂಸ್ಥೆಯ ಸದಸ್ಯರಾದಂತಹ ಸಂಭಾಜಿ ಗಾವಳಕರ್ ಇವರು ವಿದ್ಯಾರ್ಥಿಗಳಿಗೆ ವಿವೇಕಾನಂದನ ಚರಿತ್ರೆಯ ಮೂಲಕ ಜೀವನ ಕ್ರಮದ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.
ಸಂಸ್ಥೆಯ ಸ್ಥಳೀಯ ಸಮಿತಿಯ ಅಧ್ಯಕ್ಷರಾದ ಜಿಜಿ ಗಾಂಧಲೇ ಯವರು ಮಾತನಾಡಿದರು
ಕಾರ್ಯಕ್ರಮದ ನಿರೂಪಣೆ ದೈಹಿಕ ಉಪನ್ಯಾಸಕ ಸಂಜಯಗೌಡ ರವರು ಮಾಡಿದ ರು ಅತಿಥಿಗಳ ಸ್ವಾಗತ ಪ್ರಾಚಾರ್ಯರಾದ ರಾಜೇಶ್. ದೇಸಾಯಿ ಮಾಡಿದರು ವರದಿ ವಾಚನ ಶ್ರೀಮತಿ ಮೇಘನಾ ಆರ್ ನಾಯ್ಕ್, ಶ್ರೀಮತಿ ಅಶ್ವಿನಿ ದೇಸಾಯಿವಂದಿಸಿದರು , ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು .
