ಸುದ್ದಿ ಕನ್ನಡ ವಾರ್ತೆ
ಶಿರಸಿ: ದೀಪಾವಳಿ ಮಲೆನಾಡಿನಲ್ಲಿ ಗೋ ಪೂಜೆಯ ದೊಡ್ಡ ಹಬ್ಬ. ಸ್ಬರ್ಣವಲ್ಲೀ‌ ಮಹಾ ಸಂಸ್ಥಾನದಲ್ಲೂ ಗೋವುಗಳ ಪೂಜೆ ಜೊತೆ ದನ ಬಯಲು‌ ಕೂಡ ನಡೆಯಿತು.

ಗೋಪೂಜೆಗೆ ಹಾಗೂ ದನ ಬಯಲಿಗೆ ಸ್ವತಃ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಉಭಯ ಯತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ‌ಸ್ವಾಮೀಜಿಗಳು, ನೂತನ ಯತಿ ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಗಳು ಭಾಗವಹಿಸಿದ್ದರು.

ದನ ಬಯಲಿನಲ್ಲಿ‌ ಪಂಚಾಂಗ ಶ್ರವಣ ಮಾಡುತ್ತಿದ್ದಂತೆ ಗೋವುಗಳ ಯತಿಗಳಿಬ್ಬರ ಸಮೀಪ ಆಗಮಿಸಿ ಧನ್ಯತಾ ಭಾವ ಅನುಭವಿಸಿದಂತೆ‌ ಅನಿಸಿತು. ಈ ಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಕೂಡ ಆಗಿವೆ.