ಸುದ್ದಿ ಕನ್ನಡ ವಾರ್ತೆ
ಹೂವಿನಹಡಗಲಿ: ಪಟ್ಟಣದ ಹೊರವಲಯದಲ್ಲಿರುವ ಸಿಎನ್ಜಿ ಸಪ್ಲೆ ಕೇಂದ್ರದಿಂದ ಕುಡತಿನಿ ಪೆಟ್ರೋಲ್ ಬಂಕ್ ಗೆ ಕಳುಹಿಸಲಾಗುತ್ತಿದ್ದ ಸಿಎನ್ಜಿ ಲಾರಿಯಲ್ಲಿನ ಸಿಲೆಂಡರ್ ಸೋರಿಕೆಯಿಂದಾಗಿ ಭಾರಿ ಅನಾಹುತ ಆಗುವುದು ತಪ್ಪಿದೆ.

ಪಟ್ಟಣದ ಕೆಇಬಿ ಸರ್ಕಲ್ ಬಳಿಯಿಂದ ಸಿಎನ್ ಜಿ ತುಂಬಿಕೊಂಡು ಕುಡುತಿನಿಗೆ ಪೆಟ್ರೋಲ್ ಬಂಕಿಗೆ ಸಾಗಾಣಿಕೆ ಮಾಡುತ್ತಿದ್ದಾಗ ಮಾರ್ಗಮಧ್ಯ ಸಿಲೆಂಡರ್ ಕ್ಯಾಪ್ ಸಡಿಲಿಕೆಯಾಗಿ ಇದ್ದಕ್ಕಿದ್ದಂತೆ ಭಾರಿಶಬ್ದದೊಂದಿಗೆ ಗ್ಯಾಸ್ ಸೋರಿಕೆಯಾಗಿದೆ. ಸಂದರ್ಭದಲ್ಲಿ ಲಾರಿ ಚಾಲಕ ತಕ್ಷಣ ಲಾರಿ ನಿಲ್ಲಿಸಿ ಹೊರಗೆ ಓಡಿ ಬಂದಿದ್ದಾನೆ.

ಲಾರಿಯಲ್ಲಿದ್ದ ಅಂದಾಜು 60 ಸಿಲೆಂಡರ್ ಗಳಿಂದ 540 ಕೆ.ಜಿ ಯಷ್ಟು ಗ್ಯಾಸ್ ಸಂಪೂರ್ಣವಾಗಿ ಸೋರಿಕೆಯಾಗಿದೆ.
ತಪ್ಪಿದ ಅನಾಹುತ: ಘಟನಾ ಸ್ಥಳಕ್ಕೆ ಅಗ್ನು ಶಾಮಕ ದಳದವರು ಸಕಾಲಕ್ಕೆ ಆಗಮಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು ರಸ್ತೆ ಅಕ್ಕ ಪಕ್ಕದಲ್ಲಿ ಯಾವುದೇ ಅಂಗಡಿ ಮುಗಟ್ಟುಗಳು ಇಲ್ಲದ ಕಾರಣ ಯಾವಯದೇ ಅನಾಹುತವಾಗಲಿಲ್ಲ.

ರಸ್ತೆ ಸಂಚಾರ ವ್ಯತ್ಯಯ: ರಸ್ತೆ ಮಧ್ಯ ಘಟನೆ ಸಂಭವಿಸಿದ್ದರಿಂದ ವಾಹನ ಸಂಚಾರಕ್ಕೆ ಅಡೆ- ತಡೆಯಾಗಿದ್ದು ಉಂಟಾಗಿತ್ತು.