ಸುದ್ದಿ ಕನ್ನಡ ವಾರ್ತೆ
ಜೊಯಿಡಾ: ತಮ್ಮಣಗೆ ದಾಂಡೇಲಿ ಬಸ್ ಬುಧವಾರ ಬೆಳಿಗ್ಗೆ ದಾರಿಯಲ್ಲಿ ಕೆಟ್ಟು ನಿಂತಿದೆ. ಜೊಯಿಡಾ ತಾಲೂಕಿನ ಗ್ರಾಮೀಣ ಭಾಗಗಳಿಗೆ ಕೆಲವೇ ಕೆಲವು ಬಸ್ ಗಳು ಓಡಾಡುತ್ತಿವೆ. ಅವುಗಳು ದಾಂಡೇಲಿ ಡಿಪೋ ದಿಂದ ಬರುತ್ತಿವೆ. ಜೊಯಿಡಾ ತಾಲೂಕು ವಿಸ್ತಾರದಲ್ಲಿ ದಾಂಡೇಲಿ ತಾಲೂಕಿನ ನಾಲ್ಕು ಪಟ್ಟು ದೊಡ್ಡದಿದ್ದರೂ ಬಸ್ ಘಟಕವಿಲ್ಲ. ಹೀಗಾಗಿ ದಾಂಡೇಲಿ ಡಿಪೋ ದವರಿಗೆ ಶರಣು ಹೇಳಬೇಕಾಗಿದೆ. ದಯಮಾಡಿ ಉತ್ತಮ ಬಸ್ ಕಳಿಸಿಕೊಡಿ ಎಂದು.
ಈಗಿನ ವ್ಯವಸ್ಥೆಯಲ್ಲಿ ಯಾರೂ ಜವಾಬ್ದಾರಿಯನ್ನು ಹೊತ್ತು ಕೆಲಸ ಮಾಡುವವರು ಇಲ್ಲ.ಇದ್ದಿದ್ದರೆ ಈಗಾಗಲೇ ಜೊಯಿಡಾ ತಾಲೂಕಿಗೆ ಬಸ್ ಘಟಕ ವಾಗಿರುತ್ತಿತ್ತು. ಆಗಿಲ್ಲ ಹಾಗಾಗಿ ದಾಂಡೇಲಿ ಸಾರಿಗೆ ಘಟಕ ದವರಿಗೆ ತಾಲೂಕಿನ ಜನರು ಸಲಾಂ ಹೊಡೆಯುವ ಕಾಲ ನಡೆದಿದೆ.
ವಿಸ್ತಾರವಾದ ತಾಲೂಕಿನಲ್ಲಿ ತಮ್ಮಣಗೆ , ಅಣಶಿ , ಕ್ಯಾಸ್ಟಲ್ ರಾಕ್ , ರಾಮನಗರ ಅನಮೋಡ ವರೆಗೆ ಸಾರಿಗೆ ಬಸ್ ಚಾಲಕರು ನಿರ್ವಾಹಕರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಶ್ರಮಕ್ಕೆ ಜನತೆ ಅವರನ್ನು ಅಭಿನಂದಿಸುತ್ತಾರೆ. ಆದರೆ ಉತ್ತಮ ಬಸ್ ಇಲ್ಲದೆ ದಾರಿಯಲ್ಲಿ ಬಸ್ ಕೆಟ್ಟು ನಿಂತಾಗ , ನೆಟ್ವರ್ಕ್ ಇಲ್ಲದೆ ನರಳುವ ಅವರ ಪಾಡು ಯಾರಿಗೂ ಬೇಡ , ಅವರನ್ನು ನಂಬಿ ಅವರ ಕುಟುಂಬ ಇರುತ್ತದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಗಮನಿಸಬೇಕು. ಹಾಗಾಗಿ ಉತ್ತಮ ಬಸ್ ಗಳನ್ನ ಗ್ರಾಮೀಣ ಭಾಗಗಳಿಗೆ ನೀಡಬೇಕು.
ಪ್ರತಿ ದಿನ ಶಾಲೆ ಕಾಲೇಜ್ ನ ವಿದ್ಯಾರ್ಥಿಗಳು ಈ ಸಾರಿಗೆ ಬಸ್ ನ್ನು ನಂಬಿರುತ್ತಾರೆ. ಬಸ್ ಕೆಟ್ಟು ನಿಂತಾಗ ಮುಂದಿನ ಊರುಗಳ ವಿದ್ಯಾರ್ಥಿಗಳ ಸ್ಥಿತಿ ತುಂಬಾ ಕಷ್ಟಕರವಾಗಿದೆ. ಆ ದಿವಸದಲ್ಲಿ ಪರೀಕ್ಷೆಗಳಿದ್ದರೆ ಯಾರು ಜವಾಬ್ದಾರರು ಎನ್ನುವ ಪ್ರಶ್ನೆ ಜನತೆಯನ್ನು ಕಾಡುತ್ತಿದೆ. ಹಾಗಾಗಿ ದಾಂಡೇಲಿ ಘಟಕ ವ್ಯವಸ್ಥಾಪಕರಾದ ಮೇಡಂ ರವರು ಜೊಯಿಡಾ ಕ್ಕೆ ಪ್ರತ್ಯೇಕ ಬಸ್ ಘಟಕ ಮಾಡಲಿ ಎಂದು ಸರಕಾರಕ್ಕೆ ಪ್ರಸ್ತಾವನೆ ಕಳಿಸಿಕೊಡಲು ಜನತೆ ಆಗ್ರಹಿಸಿದ್ದಾರೆ.
