ಸುದ್ದಿ ಕನ್ನಡ ವಾರ್ತೆ
ಹೊನ್ನಾವರ:ತಾಲೂಕಿನ ಕಾಸರಕೋಡಿನ ಟೊಂಕ ಬಂದರಿನಲ್ಲಿ ನಿಲ್ಲಿಸಿದ್ದ ಪರ್ಷಿಯನ್ ಬೋಟ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟುಹೋದ ಘಟನೆ ನಡೆದಿದೆ.
ಆಯುಬ್ ಸಾಬ್ ಎಂಬುವವರಿಗೆ ಸೇರಿದ ಪರ್ಷಿಯನ್ ಬೋಟ್ ಇದಾಗಿದ್ದು ಬಂದರಿನಲ್ಲಿ ಬೋಟ್ ನಿಲ್ಲಿಸಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ಉರಿದಿದೆ.ಈವೇಳೆ ಸ್ಥಳೀಯರು ಬೆಂಕಿ ನಂದಿಸಿದ್ದಾರೆ.ಆದರೂ ಬೋಟಿನ ಸಂಪೂರ್ಣ ಭಾಗ ಸುಟ್ಟು ಹೋಗಿದ್ದು ಅದರಲ್ಲಿದ್ದ ಬಲೆ, ಇಂಜಿನ್ ಗಳು ಸಹ ಸುಟ್ಟುಹೋಗಿದೆ.
ಘಟನೆಯಲ್ಲಿ 30 ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
