ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಾಲೂಕಿನಿಂದ ಭಾರತಿಯ ಸೈನ್ಯದಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಈಶ್ವರ ವಸಂತ ನಾಯ್ಕ (30) ಅನಾರೋಗ್ಯ ಗೊಂಡಿದ್ದರಿಂದ ದೆಹಲಿಯ ಆರ್ಮಿ ಮೆಡಿಕಲ್ ಕೊರ್ಸ ಆಸ್ಪತ್ರೆಯಲ್ಲಿ . ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ನಿನ್ನೆ ಸಾವನ್ನಪ್ಪಿದ್ದಾರೆ ಎಂದು ಜೊಯಿಡಾ ಪೋಲಿಸ್ ಠಾಣೆಗೆ ಮಾಹಿತಿ ಬಂದಿದೆ.

ಮೂಲತಃ ಜೊಯಿಡಾ ತಾಲೂಕಿನ ಗಾಂಗೋಡಾ ಗ್ರಾಮ ಪಂಚಾಯತ ನಿವಾಸಿ ಯಾದ ಈಶ್ವರ ನಾಯ್ಕ ಇವರು ಕಳೆದ 10 ವರ್ಷಗಳ ಹಿಂದೆ ಭಾರತೀಯ ಸೈನ್ಯದಲ್ಲಿ ಸೇವೆಗೆ ದಾಖಲಾಗಿದ್ದರು. ಸದ್ಯ ದೆಹಲಿಯಲ್ಲಿ ಭಾರತೀಯ ಸೇನೆಯ ನರ್ಸಿಂಗ್ ಅಸಿಸ್ಟೆಂಟ್ ಆಗಿ ಕರ್ತವ್ಯದಲ್ಲಿ ಇದ್ದಾಗ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ದೆಹಲಿಯ ಆರ್ಮಿ ಮೆಡಿಕಲ್ ಕೊರ್ಸ ಆಸ್ಪತ್ರೆಗೆ ದಾಖಲಾಗಿದ್ದರು .

 

ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈಶ್ವರ ನಾಯ್ಕ ಕಳೆದ ಮೂರು ವರ್ಷಗಳ ಹಿಂದೆ ಮದುವೆ ಆಗಿದ್ದರು. ಒಂದು ವರ್ಷದ ಗಂಡು ಮಗು ಇರುವ ಬಗ್ಗೆ ತಿಳಿದು ಬಂದಿದೆ. ಪತ್ನಿ, ತಾಯಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸೋಮವಾರ ತಡೆ ರಾತ್ರಿ ಶವ ಜೊಯಿಡಾಗೆ ಬರುವ ನಿರೀಕ್ಷೆ ಇದೆ. ಮಾಜಿ ಸೈನಿಕರ ಸಂಘದಿಂದ ಮಂಗಳವಾರ ಬೆಳಿಗ್ಗೆ 11 ಜೊಯಿಡಾ ಶಿವಾಜಿ ವೃತ್ತದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಇಟ್ಟು ಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸಂತೋಷ್ ಸಾವಂತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ..