ಸುದ್ದಿ ಕನ್ನಡ ವಾರ್ತೆ
ಶಿರಸಿ: ಕರ್ನಾಟಕವನ್ನು ವಕ್ಪಗೆ ಅಡವಿಡಿವಂತಹ ಸಿದ್ದರಾಮಯ್ಯ ಸರ್ಕಾರ ಆಡಳಿತಾತ್ಮಕವಾಗಿ ತೇಗೆದುಕೊಳ್ಳುತ್ತಿರುವ ಘಟನೆಗಳನ್ನು ಖಂಡಿಸುತ್ತೇವೆ. ಮಹಮದ್ ಬಿನ್ ತುಗಲಕ್ಕನ್ನೂ ಮೀರಿಸುವ ಆಡಳಿತವಾಯ್ತು. ಮುಸ್ಲಿಂ ದೇಶದಲ್ಲೂ ಇಲ್ಲದ್ದನ್ನು ಕರ್ನಾಟಕದಲ್ಲಿ ಮಾಡಲಾಗುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದರು.
ಅವರು ಶುಕ್ರವಾರ ನಗರದ ದೀನ್ ದಯಾಳ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ರೈತರ ಪಹಣಿಯ ಕಾಲಂ11ರಲ್ಲಿ ವಕ್ಪ ಆಸ್ತಿ ಕುರಿತು ನಮೂದಿಸಬೇಕು ಎಂಬ ಸೂಚನೆಯನ್ನು ಕಂದಾಯ ಇಲಾಖೆಗೆ ನೀಡಿದ ಸೂಚನೆ ಯನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತೇವೆ.
ಇಡೀ ರಾಜ್ಯದಲ್ಲಿ ಸರ್ಕಾರ ಜಮೀರ್ ಅಹಮ್ಮದ್ ಖಾನ್ ಅವರ ನೇರ ಸೂಚನೆ ವಕ್ಫ್ ಆಸ್ತಿ ಎಂದು ನಮೂದಿಸಲಾಗುತ್ತಿದೆ. 74ರ ಗೆಜೇಟ್ ನಲ್ಲಿ ಹೇಗೆ ಬಂತು ಗೊತ್ತಿಲ್ಲ. ಸಿದ್ರಾಮುಲ್ಲಾ ಸರ್ಕಾರ ಎಂಬುದನ್ನು ಸಿದ್ದರಾಮಯ್ಯ ನವರು ಅಕ್ಷರಶಃ ಹಾಗೆಯೇ ನಡೆದುಕೊಳ್ಳುತ್ತಿದ್ದಾರೆ ಎಂದರು.
ಬ್ರಷ್ಟಾಚಾರ , ಅಭಿವೃದ್ಧಿ ರಹಿತ ಸರ್ಕಾರ. ಇವೆಲ್ಲವನ್ನೂ ಮರೆಮಾಚಲು ಇವೆಲ್ಲ ವನ್ನು ಕೈಗೆತ್ತಿಕೊಳ್ಳುತ್ತಿದೆ. ನಮ್ಮ ಜಿಲ್ಲೆಯಲ್ಲಿ ವಕ್ಪ ಆಸ್ತಿ ಎಂದು ಎರಡು ಸಾವಿರಕ್ಕೂ ಅಧಿಕ ಎಂಬ ಮಾಹಿತಿ ಇದೆ. ಕಾಲಂ ನಂಬರ್ ೧೧ ಆಗಬೇಕಾದರೆ ಕನಿಷ್ಠ ನೋಟೀಸ್ ಆದರೂ ನೀಡಬೇಕಿತ್ತು ಎಂದರು.
ವಕ್ಫ್ ವಿಚಾರವನ್ನು ಕೈಗೆತ್ತಿಕೊಂಡು ಷಡ್ಯಂತ್ರ ರೂಪಿಸಿದ್ದಾರೆ. ಕೇಂದ್ರ ದಲ್ಲಿ ವಕ್ಫ್ ಕಾಯಿದೆ ತಿದ್ದುಪಡಿಯನ್ನು ಮಂಡಿಸಿದ್ದೇವೆ. ಕಾಂಗ್ರೆಸ್ ಆಡಳಿತದಲ್ಲಿರುವ ಎಲ್ಲಾ ಕಡೆ ಇದೇ ನಡೆಯುತ್ತಿದೆ. ಇದು ಅತ್ಯಂತ ಅಪಾಯಕಾರಿ ನಿಲುವಾಗಿದೆ ಎಂದರು.
ಗುಲಾಮಿ ತನದ ಮಾನಸಿಕವಾಗಿಯೇ ಇಡುಲು ಕಾಂಗ್ರೆಸ್ ಮುಂದಾಗುತ್ತಿದೆ. ವಕ್ಫ್ ನ ಕಾಯಿದೆಗೆ ಇಲ್ಲಿಲ್ಲದ ತಿದ್ದುಪಡಿ ತಂದು ಮುಸ್ಲಿಂರನ್ನು ಮುಖ್ಯ ವಾಹಿನಿಗೆ ತರಲು ಕಾಂಗ್ರೆಸ್ ಸಾಹಸ ಪಡುತ್ತಿದೆ. ಕಾನೂನು ದುರಾಲೊಇಚನೆ
ಕಾಂಗ್ರೆಸ್ ಆಡಳಿತ ಬಿದ್ದಲ್ಲಿ ಇದರೆ ಆಗುತ್ತಿದೆ. ಅಪಾಯ ಆಗುತ್ತಿರುವ ನಿಲುವು. ಸ್ವಾತಂತ್ರ್ಯಾನಂತರ ಭಾರತ ಭಾರತವಾಗಿ ಮುನ್ನಡೆಸಬೇಕು. ಕಾಂಗ್ರೆಸ್ ಸರಕಾರದ ಅವಧಿ, ಕಾಂಗ್ರೆಸ್ ಆಡಳಿತದ ಇದ್ದ ರಾಜ್ಯದಲ್ಲಿ ಕಾಂಗ್ರೆಸ್ ವಕ್ಪ ಕಾಯಿದೆಗೆ ಇನ್ನಿಲ್ಲದ ತಿದ್ದುಪಡಿ ತಂದಿದೆ. ಈ ರಾಷ್ಟ್ರದ ಮುಖ್ಯ ವಾಹಿನಿಯಲ್ಲಿ ಇವರು ಇರದಂತೆ ನೋಡಿಕೊಳ್ಳುತ್ತಿರುವದು ಕಾಂಗ್ರೆಸ್ ಎಂದರು.
ವಕ್ಪ ಆಸ್ತಿಗಳು ಮುಸ್ಲಿಂ ಸಮುದಾಯದ ಬಲಿಷ್ಠ ಜನರ ಇನ್ನಷ್ಟು ಬಲಿಷ್ಠಕ್ಕೆ ಅನುಕೂಲ ಆಗಲಿದೆ. ಜಮೀರ್ ನಂತಹ ಶ್ರೀಮಂತರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ ಎಂದ ಕಾಗೇರಿ, ತಿದ್ದುಪಡಿ ಆಗಬೇಕು ಎಂದು
ಗುರುಪ್ರಸಾದ ಶಾಸ್ತ್ರಿ, ಆನಂದ ಸಾಲೇರ, ಸದಾನಂದ ಭಟ್ ನ ನಿಡಗೋಡ, ನಾಗರಾಜ ನಾಯ್ಕ, ಶರ್ಮಿಳಾ ಮಾದನಗೇರಿ, ರವೀಂದ್ರ ಶೆಟ್ಟಿ ಇತರರು ಇದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಹರ್ತೆಬೈಲ್,ಆರ್ ಡಿ ಹೆಗಡೆ, ನಗರ ಮಂಡಳ ಅಧ್ಯಕ್ಷ ಆನಂದ ಸಾಲೇರ್, ವಕ್ತಾರ ಸದಾನಂದ ಭಟ್, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಾಗರಾಜ್ ನಾಯ್ಕ ಇದ್ದರು.
*ಕಣ್ಣಿದ್ದೂ ಕುರುಡು, ಕಿವಿಯಿದ್ದೂ ಕಿವುಡು*
ದಪ್ಪ ಚರ್ಮದ ಸರಕಾರ. ಕಣ್ಣಿದ್ದೂ ಕಾಣದ, ಕಿವಿಯಿದ್ದೂ ಕೇಳದ ಸರಕಾರ ಇದು. ನ.೪ರಂದು ಪ್ರತಿ ತಾಲೂಕು ಕೇಂದ್ರದಲ್ಲಿ ಹೋರಾಟ ಮಾಡುತ್ತೇವೆ. ಲ್ಯಾಂಡ್ ಜಿಹಾದ್ ರೀತಿಯ ಕೆಲಸಕ್ಕೆ ಪ್ರತಿಭಟನೆ.
ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ