ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹನುಮಾನಲೇನ್ ಶಾಲೆಯಲ್ಲಿ
ದಿನಾಂಕ 18-07-2026 ರಂದು ೨ ನೇ ಸಂಭ್ರಮ ಶನಿವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ೭ ನೇ ತರಗತಿಯ ವಿದ್ಯಾರ್ಥಿಗಳಿಗೆ ೧ ನೇ ಅವಧಿ ಅರಿವು: ಪರಿಣಾಮವನ್ನು ಹೊಂದಿಸಿ ಚಟುವಟಿಕೆಯನ್ನು ಕ್ರಮವಾಗಿ ಮಾಡಲು, ಶ್ವಾಸಕೋಶ ಮತ್ತು ಯಕೃತ್ತಿನ ಬಗ್ಗೆ ತಿಳಿಸಿ ಯಾವ ವಿಷಕಾರಿ ವಸ್ತುಗಳಿಂದ ಯಾವ ಭಾಗಕ್ಕೆ ಹಾನಿಯಾಗುತ್ತದೆ ಎಂದು ತಿಳಿಸಲಾಯಿತು.
ಅವಧಿ ೨ ರಲ್ಲಿ ಅನುಭವದಲ್ಲಿ “ಶಾಲೆಯ ಸುತ್ತ ಒಂದು ಸುತ್ತು ಹೋಗಿ ಬರೋಣ” ಎಂಬ ಚಟುವಟಿಕೆಯಲ್ಲಿ ಶಾಲೆಯ ಸುತ್ತ ಹೋಗಿ ತಮ್ಮ ಕಣ್ಣಿಗೆ ಕಾಣುವ ವಸ್ತುಗಳನ್ನು ಸಂಗ್ರಹಿಸಲು ತಿಳಿಸಲಾಯಿತು, ನಂತರದಲ್ಲಿ ಅವುಗಳನ್ನು ವಿಷಕಾರಿ ವಸ್ತು ಹಾಗೂ ವಿಷಕಾರಿ ಅಲ್ಲದ ವಸ್ತುಗಳಾಗಿ ವಿಂಗಡಿಸಲು ತಿಳಿಸಲಾಯಿತು. ಈ ಚಟುವಟಿಕೆ ಮೂಲಕ ಅವುಗಳಲ್ಲಿರುವ ಮಾದಕ ವಸ್ತುಗಳನ್ನು ಹಾನಿಕಾರಕ ಎಂಬುದನ್ನು ತಿಳಿಸಲಾಯಿತು.
೩ ನೇ ಅವಧಿ ಅವಲೋಕನದಲ್ಲಿ ಅರಿವು ಮೂಡಿಸೋಣ ಎಂಬ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಂದ “ಕುಡಿತದಿಂದಾಗುವ ದುಷ್ಪರಿಣಾಮ” ಎಂಬ ಕಿರು ನಾಟಕವನ್ನು ತರಗತಿಯಲ್ಲಿ ಪ್ರದರ್ಶನಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನ,ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿರವರು ಮಾತನಾಡಿ ಮಾದಕ ವಸ್ತುಗಳ ದುರುಪಯೋಗವು ಇಂದು ಜಾಗತಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಸವಾಲಾಗಿ ಪರಿಣಮಿಸಿದೆ. ಪ್ರತಿಯೊಬ್ಬ ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಮೇಲೆ ಇದು ಮಾರಕ ಪರಿಣಾಮ ಬೀರುತ್ತದೆ. ಇದನ್ನು ತಡೆಗಟ್ಟಲು ಶಿಕ್ಷಣ, ಕಠಿಣ ಕಾನೂನುಗಳು, ಸಮಾಜದ ಜಾಗೃತಿ ಮತ್ತು ಸೂಕ್ತ ಚಿಕಿತ್ಸಾ ವ್ಯವಸ್ಥೆಗಳ ಸಮರ್ಪಕ ನಿರ್ವಹಣೆ ಅತ್ಯಗತ್ಯವಾಗಿದೆ.ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಇದರಲ್ಲಿ ಪ್ರತಿಯೊಬ್ಬ ನಾಗರೀಕ, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳ ಮತ್ತು ಮಾಧ್ಯಮಗಳ ಸಹಭಾಗಿತ್ವ ಅತ್ಯಗತ್ಯ. ಜಾಗೃತಿ ಮತ್ತು ನಿರಂತರ ಪ್ರಯತ್ನಗಳ ಮೂಲಕ ಯುವ ಪೀಳಿಗೆಯನ್ನು ರಕ್ಷಿಸಿ, ಆರೋಗ್ಯವಂತ ಮತ್ತು ಸದ್ಭಢ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಶಾಲೆಯ ಸಹ ಶಿಕ್ಷಕಿಯರಾದ ನಾಗರತ್ನಾ ಮೊಗೇರ,ಅನಿಸ್ ಫಾತಿಮಾ,ಸುನಿತಾ ಆರ್,ಸಂಜನಾ ಮಿರಾಶಿ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳಲ್ಲಿ ಮಾರ್ಗದರ್ಶನ,ಸಹಕಾರ ನೀಡಿದರು.
