ಸುದ್ದಿ ಕನ್ನಡ ವಾರ್ತೆ
ಶಿರಸಿ:ತಾಲೂಕಿನ ಬನವಾಸಿಯಲ್ಲಿ ಕೆಲವು ದಿನಗಳ ಹಿಂದೆ ದಾಖಲಾದ ಆಕಳು ಕಳ್ಳತನ ಪ್ರಕರಣವನ್ನು ಬನವಾಸಿ ಠಾಣೆ ಪೊಲೀಸರು ಭೇದಿಸಿದ್ದು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬನವಾಸಿಯ ಸೊರಬ ರಸ್ತೆಯಲ್ಲಿರುವ ರೈತ ಮದನ ಮಂಜುನಾಥ ಅರೆರ ಅವರ ಆಕಳನ್ನು ಯಾರೋ ಕಳ್ಳರು ಅಪಹರಣ ಮಾಡಿಕೊಂಡು ಹೋಗಿದ್ದರು. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಮೇ 23ರಂದು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ದನ ಕಳ್ಳರು ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು.
ಆರೋಪಿಗಳಾದ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಹೊನ್ನಬಾಗಿಯ ಮಹಮ್ಮದ್ ಇಸ್ಮಾಯಿಲ್ ಮಹಮ್ಮದ್ ಅನ್ವರ್ (20) ಹಾಗೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಾಗೆಕೋಡಮಗ್ಗಿಯ ಅಡಿಕೆ ವ್ಯಾಪಾರಿ ಮಹಮ್ಮದ್ ತಂದೆ ಮಹಮ್ಮದ್ ಯಾಸಿನ್ (26) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಕಳ್ಳತನಕ್ಕೆ ಬಳಸಿದ್ದ 2 ಲಕ್ಷ ರೂ. ಮೌಲ್ಯದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
