Banner Ad

ಸುದ್ಧಿಕನ್ನಡ
Goa  : ಕರ್ನಾಟಕದ ಸಚಿವರೋರ್ವರ ಕಾರು ಚಾಲಕ ಸಂದೀಪ್ ಸಲಾಯಂ ಮಲ್ಪೆ ಅವರು ಗೋವಾದ ರೆಸಾರ್ಟವೊಂದರಲ್ಲಿ ಮಂಗಳವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅವರು ಮೂಲತಃ ಉಡುಪಿಯವರು ಎಂಬ ಮಾಹಿತಿ ಲಭ್ಯವಾಗಿದೆ.

ಸ್ವೀಕರಿಸಿದ ಮಾಹಿತಿಯ ಪ್ರಕಾರ, ಸಂದೀಪ್ ಸಲಾಯಂ ಮಲ್ಪೆ ಗೋವಾ ರಾಜಧಾನಿ ಪಣಜಿಗೆ ಆಗಮಿಸಿದ್ದು ಪಣಜಿಯ ಕ್ಯಾಸಿನೊದ ಮಹಿಳೆಯೊಂದಿಗೆ ಕಲಂಗುಟ್‍ನ ರೆಸಾರ್ಟ್‍ಗೆ ಬಂದಿದ್ದರು. ಎನ್ನಲಾಗಿದೆ. ಅಪರಿಚಿತ ಮಹಿಳೆಯೋರ್ವರು ನೀಡಿದ ಸಿಗರೇಟ್ ಸೇವನೆಯ ನಂತರ ಅವರು ಕುಸಿದುಬಿದ್ದರು ಎನ್ನಲಾಗಿದೆ. ದಿಢೀರ್ ಕುಸಿದುಬಿದ್ದ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

Banner Ad

 

ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ, ಪೆÇಲೀಸರು ಸ್ಥಳಕ್ಕೆ ಧಾವಿಸಿ ಪಂಚನಾಮೆಯನ್ನು ನಡೆಸಿದರು, ಆದರೆ ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪೆÇಲೀಸರು ಈ ವಿಷಯವನ್ನು ವಿವಿಧ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ ಮತ್ತು ಮರಣೋತ್ತರ ಪರೀಕ್ಷೆಯ ವರದಿಯ ನಂತರ ಸಾವಿನ ಕಾರಣ ಸ್ಪಷ್ಟವಾಗುವ ಸಾಧ್ಯತೆಯಿದೆ.

Banner Ad