ಸುದ್ದಿ ಕನ್ನಡ ವಾರ್ತೆ

ಅಂಬಾರಿ ಕ್ವಿನ್ ಟ್ರಸ್ಟ್ ರಿ ಜೋಯಿಡಾ /ದಾಂಡೇಲಿ ಹಾಗೂ ಪತಂಜಲಿ ಯೋಗ ಸಮಿತಿ ಇವರ ಸಹಯೋಗದಲ್ಲಿಜೋಯಿಡಾ ದಲ್ಲಿ ಯೋಗ ದಿನಾಚರಣೆಯನ್ನುಮಾಡಲಾಯಿತು ಸುಮಾರು 2 ತಿಂಗಳಿಂದ ಯೋಗಾಸನ ಅಭ್ಯಾಸ ನಡೆಯುತ್ತಿದ್ದು ಇಂದು ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಯೋಗಾಭ್ಯಾಸ ಮಾಡಲಾಯಿತು ಬೆಳಿಗ್ಗೆ 5 30 ರಿಂದ 6 30 ರ ವರೆಗೆ ಯೋಗದಿನಾಚರಣೆ ಅಂಗವಾಗಿ ಯೋಗಾಸನ ನಡೆಯಿತು

ಭವಾನಿ ನಿತಿನ ಚವ್ಹಾಣ ಹಾಗೂ ಪೂಜಾ ಟರ್ಕಿ ಇವರ ಮಾರ್ಗದರ್ಶನದಲ್ಲಿ ಇಂದಿನ ಕಾರ್ಯಕ್ರಮ ನಡೆಯಿತು ಮುಂದಿನ ದಿನಗಳಲ್ಲಿ ಸರ್ಟಿಫಿಕೇಶನ್ ಕೋರ್ಸ್ ನಡೆಯುಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಬೇಕಾಗಿ ಕೋರಿಕೊಳ್ಳಲಾಗಿದೆ.

ಇಂದಿನ ಕಾರ್ಯಕ್ರಮದಲ್ಲಿ ಭವಾನಿ, ಪೂಜಾ ಜೊತೆಗೆ ರೇಣುಕಾ ಜಿ ಕೆ , ಲಕ್ಷ್ಮೀ ನಿರ್ಮಲಾ, ವಂದನಾ, ಶೋಭಾ, ಸುವರ್ಣ, ವಿದ್ಯಾ,ಭಾಗ್ಯ, ಪ್ರಭಾ,ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.