ಸುದ್ದಿ ಕನ್ನಡ ವಾರ್ತೆ
ಜೋಯಿಡಾ ದಲ್ಲಿ ಎರಡು ಸಾರಿಗೆ ಸಂಸ್ಥೆಯ ಬಸ್ಸುಗಳ ಮುಖಾ ಮುಖಿ ಡಿಕ್ಕಿ ಇಂದು ಬೆಳಿಗ್ಗೆ 9 ಘಂಟೆ ಸುಮಾರಿಗೆ ನಡೆದಿದೆ. ಉಳವಿ ಇಚಲಕರಂಜಿ ಮತ್ತು ಕಾರವಾರ ಕಡೆಗೆ ಹೊರಟಿದ್ದ ಬಸ್ ಗಳ ನಡುವೆ ಈ ಗುದ್ದಾಟ ನಡೆದಿದೆ.
ಬಾಪೇಲಿ ಜೋಯಿಡಾ ಕಾರವಾರ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಇಲ್ಲಿ ನೆಟ್ವರ್ಕ್ ಇಲ್ಲದ ಕಾರಣ, ಕೆಲವು ಪ್ರಯಾಣಿಕರು ಗುಡ್ಡ ಏರಿ ಅಂಬ್ಯುಲೆನ್ಸ್ ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆಆಗಮಿಸಿ ಗಾಯಾಳು ಗಳನ್ನು ಜೋಯಿಡಾ ಆಸ್ಪತ್ರೆಗೆ ದಾಖಲಿಸ ಲಾಗಿದೆ ಎಂದು ಹೇಳಲಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ
