ಸುದ್ದಿ ಕನ್ನಡ ವಾರ್ತೆ

ಬಿಜೆಪಿ ರೈತಮೋರ್ಚಾ, ಉತ್ತರಕನ್ನಡದ ವತಿಯಿಂದ ನರೇಂದ್ರಮೋದಿಯವರು ಪ್ರಧಾನ ಮಂತ್ರಿಯಾಗಿ ದಕ್ಷ ಆಡಳಿತದಿಂದ ಯಶಸ್ವಿಯಾಗಿ ೧೨ ವರ್ಷ ಪೂರೈಸಿದ ಹಿನ್ನಲೆಯಲ್ಲಿ ” ವಿಶ್ವಾಸ ಕೇ, ವಿಕಾಸ ಕೇ, ಜನ ಕಲ್ಯಾಣ ಕೇ “ಎಂಬ ಘೋಷ ವಾಕ್ಯದ ಅಡಿಯಲ್ಲಿ ನೈಸರ್ಗಿಕ ಕೃಷಿ ಕಾರ್ಯಗಾರ ಆಯೋಜಿಸಲಾಗಿದೆ.ಸಾವಯುವ ಗೊಬ್ಬರದ ಉಪಯೋಗ ಬಳಕೆ ಮಾಡಿ ಉತ್ತಮ ಇಳುವರಿ ಪಡೆಯಲಿ ಎಂಬ ಉದ್ದೇಶದಿಂದ ರೈತರಿಗೆ ಸಾವಯವ ಕೃಷಿಯ ಮಹತ್ವದ ಕುರಿತು ರೈತ ಮೊರ್ಚಾ ಉತ್ತರಕನ್ನಡದ ವತಿಯಿಂದ ಸಾವಯವ ಕೃಷಿ ಕಾರ್ಯಾಗಾರ ಇದೆ ಬರುವ
೨೦ ಜೂನ್ ಶನಿವಾರ ಬೆಳಿಗ್ಗೆ ೧೦:೩೦ಕ್ಕೆ ಪ್ರಗತಿಪರ ಕೃಷಿಕ ಎನ್.ಡಿ.ಹೆಗಡೆ, ಅವರ ಕುಮಟಾದ ಅಂತ್ರವಳ್ಳಿಯ ಅವರ ತೋಟ ಕಡಸಾಲಗದ್ದೆಯಲ್ಲಿ ಕಾರ್ಯಾಗಾರ ನಡೆಯಲಿದೆ.

ಕಾರ್ಯಾಗಾರದಲ್ಲಿ ನೈಸರ್ಗಿಕ ಕೃಷಿ ಸಾವಯವ ಗೊಬ್ಬರದ ಉಪಯೋಗ ಮತ್ತು ಮಹತ್ವದ ಹಾಗೂ ಮಣ್ಣಿನ ಸಾರ ಹಾಗೂ ಸುಧಾರಣೆಯ ವಿಧಾನಗಳು, ಜೀವಾಮೃತ ಬೀಜಾಮೃತ ಘನಜೀವಾಮೃತ ತಯಾರಿಸುವ ವಿಧಾನಗಳು, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯಗಳಿಸುವ ತಂತ್ರಗಳು, ರೋಗ ಮತ್ತು ನಿರ್ವಹಣೆ- ನೈಸರ್ಗಿಕ ವಿಧಾನಗಳು ರೈತರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯನ್ನು ನೀಡುವುದು ವಿಶೇಷವಾಗಿದೆ. ಈ ಕಾರ್ಯಕ್ರಮಕ್ಕೆ ಶಾಸಕರು, ಸಂಸದರು, ಜನಪ್ರತಿನಿಧಿಗಳು ರಾಜ್ಯದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷರಾದ ಅನಂತಮೂರ್ತಿ ಹೆಗಡೆ ಪ್ರಕಟಣೆ ನೀಡಿ ವಿನಂತಿಸಿಕೊಂಡಿದ್ದಾರೆ .