ಸುದ್ದಿ ಕನ್ನಡ ವಾರ್ತೆ

ಸಿದ್ದಾಪುರ: ತಾಲೂಕಿನ ಬಿದ್ರಕಾನಿನ ಯುವ ಪ್ರತಿಭೆ, ಶ್ರೀ ಪ್ರವೀಣ ಹೆಗಡೆ (ಬೂಸಾ) ಅವರ ಆಕಸ್ಮಿಕ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ಆಘಾತವಾಗಿದೆ.

ಕೃಷಿ, ಉದ್ಯಮ ಹಾಗೂ ಕ್ರಿಕೆಟ್ ಮೈದಾನದಲ್ಲಿ ತನ್ನದೇ ಛಾಪು ಮೂಡಿಸಿ, ಇಡೀ ಜಿಲ್ಲೆಯಾದ್ಯಂತ ಚಿರಪರಿಚಿತನಾಗಿದ್ದ ಪ್ರವೀಣ ಹೀಗೆ ಅರ್ಧದಲ್ಲೇ ವಿಧಿಯ ಆಟಕ್ಕೆ ಬಲಿಯಾಗಿರುವುದು ಅತ್ಯಂತ ದುಃಖದ ಸಂಗತಿ.

ಹೆತ್ತವರಿಗೆ ಆಸರೆಯಾಗಬೇಕಾಗಿದ್ದ ಯುವಕನ ಅಕಾಲಿಕ ಮರಣದಿಂದ ಇಡೀ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.
ಮಗನನ್ನು ಕಳೆದುಕೊಂಡ ಹೆತ್ತವರ ಒಡಲ ಬೇಗೆಗೆ ಮತ್ತು ಕಣ್ಣೀರಲ್ಲಿ ಮುಳುಗಿರುವ ಕ್ರೀಡಾಭಿಮಾನಿಗಳ ನೋವಿಗೆ ಸಾಂತ್ವನ ಹೇಳಲು ಶಬ್ದಗಳೇ ಸಾಲುತ್ತಿಲ್ಲ.
ಭಗವಂತನು ಮೃತರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ, ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆತನ ಹೆತ್ತವರಿಗೆ, ಕುಟುಂಬಸ್ಥರಿಗೆ ಹಾಗೂ ಸಹಸ್ರಾರು ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.