ಸುದ್ದಿ ಕನ್ನಡ ವಾರ್ತೆ

ಭಟ್ಕಳ : ಪಟ್ಟಣದ ವಡೇರ ಮಠದಲ್ಲಿ ಅಧಿಕ ಜೇಷ್ಠ ಮಾಸದಲ್ಲಿ ಶ್ರೀಮಠದ ಸ್ಥಾಪನೆಯ 550ನೇ ವರ್ಷದ ಸ್ಮರಣಾರ್ಥ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳಿಂದ ಶ್ರೀ ರುಕ್ಷ್ಮಿಣಿ ಸತ್ಯಭಾಮಾ ಸಹಿತ ಶ್ರೀ ಗೋಪಾಲಕೃಷ್ಣ ದೇವರಿಗೆ ಶತಕಲಶಾಭಿಷೇಕ ನೆರವೇರಿತು.

ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ವೆ.ಮೂ. ಕಿಶೋರ ಭಟ್ ಅವರ ನೇತ್ರತ್ವದಲ್ಲಿ ಶನಿವಾರ ಬೆಳಿಗ್ಗೆಯಿಂದಲೆ ವಿವಿಧ ಧಾರ್ಮಿಕ ಅನುಷ್ಠಾನಗಳು ನೆರವೇರಿದವು, ಮುರಳಿ ಭಟ್ ಸಹಕರಿಸಿದರು. ಆದಿಗುರು ಶ್ರೀಮದ್‌ ನಾರಾಯಣ ತೀರ್ಥ ಸ್ವಾಮೀಜಿಗಳಿಂದ ಸ್ಥಾಪನೆಗೊಂಡ ಶ್ರೀಮಠದ 550ನೇ ವರ್ಷದ ಸವಿನೆನಪಿನ ಅಂಗವಾಗಿ ಆಯೋಜಿಸಲಾದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಅಧಿಕಮಾಸದ ವಿಶೇಷ ವಾಸ್ತವ್ಯದ ಹಿನ್ನೆಲೆಯಲ್ಲಿ ಊರು ಹಾಗೂ ಪರಊರಿನ ಸಮಾಜ ಬಾಂಧವರು ಶ್ರೀಗಳ ಬೇಟಿ ಪಡೆದು ಆಶೀರ್ವಾದ ಪಡೆದರು. ಇದೇ ವೇಳೆ ಶ್ರೀಮಠದ ಅನೇಕ ಭಕ್ತರು ಭಿಕ್ಷಾ ಸೇವೆ ನಡೆಸಿದರು. ಅಳಿವೆಕೋಡಿ
ದುರ್ಗಾ ಪರಮೇಶ್ವರಿ ದೇವಸ್ಥಾನ, ಶಿರಾಲಿ, ಕುಮಟಾ ಹಾಗೂ ನಾಡಿನ ವಿವಿದೆಡೆಯಿಂದ ದೇವಸ್ಥಾನಗಳ ಆಡಳಿತ ಮಂಡಳಿ ಪಧಾಧಿಕಾರಿಗಳು ಶ್ರೀಗಳ ಬೇಟಿಯಾಗಿ ಅನುಗ್ರಹ ಮಂತ್ರಾಕ್ಷತೆ ಪಡೆಯುತ್ತಿದ್ದಾರೆ
ಜೂ 2ರಿಂದ ಆರಂಭಗೊಂಡ ವೇದಮೂರ್ತಿ ರಾಮಕೃಷ್ಣ ಭಟ್ ಅವರಿಂದ ನಡೆಯುತ್ತಿರುವ ಭಾಗವತ ಪ್ರವಚನ ಭಕ್ತರ ಮನಸೂರೆಗೊಳ್ಳುತ್ತಿದ್ದು, ಪ್ರದೀಪ
ಜಿ. ಪೈ ಅವರಿಂದ ನಡೆಯುತ್ತಿರುವ ಭಾಗವತ ಸೇವೆಯೂ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ. ಆಡಳಿತ ಮಂಡಳಿ ಅಧ್ಯಕ್ಷ ನರೇಂದ್ರ ನಾಯಕ, ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ, ಜಿಎಸ್ಎಸ್ ಅಧ್ಯಕ್ಷ ಗಿರಿಧರ ನಾಯಕ, ಮಹಿಳಾ ಮಂಡಳಿ ಅಧ್ಯಕ್ಷೆ ಸುನೀತಾ ಪೈ ಸೇರಿದಂತೆ ಸಮಾಜದ ಮುಖಂಡರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.