ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ:ತಾಲೂಕಿನ ಅಡಕೆ ವ್ಯವಹಾರಸ್ಥರಾದ
ಉಮೇಶ ಎಸ್.ಭಟ್ಟ (73) ಮಂಗಳವಾರ ನಿಧನ ಹೊಂದಿದ್ದಾರೆ.

ದಿವಂಗತರು ಮೂಲತಃ ಕುಮಟಾದ ಚಿತ್ತರಗಿಯವರಾದರೂ ಯಲ್ಲಾಪುರಕ್ಕೆ ಬಂದು ಪಟ್ಟಣದ ಎಪಿಎಂಸಿಯಲ್ಲಿ ಗಾಯತ್ರಿ ಟ್ರೇಡಿಂಗ್ ಕಂಪನಿಯ ಭಾಗೀದಾರರಾಗಿ, ಅದಕ್ಕೂ ಮೊದಲು ಓಂಕಾರ ಟ್ರೇಡಿಂಗ್ ಇವರು ಕಂಪನಿಯ ಸಂಸ್ಥಾಪಕರಲ್ಲೊಬ್ಬರಾದ, ಧಾರ್ಮಿಕರು, ಕಲಾರಾಧಕರಾಗಿದ್ದರು. ಹೆಂಡತಿ, ಮಗ, ಇಬ್ಬರು ಹೆಣ್ಣುಮಕ್ಕಳು, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಶಾಸಕರಾದ ಶಿವರಾಮ ಹೆಬ್ಬಾರ, ಸಂಕಲ್ಪದ ಅಧ್ಯಕ್ಷರಾದ ಪ್ರಮೋದ ಹೆಗಡೆ, ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದು, ಸಂತಾಪ ಸೂಚಿಸಿದ್ದಾರೆ.