ಸುದ್ದಿ ಕನ್ನಡ ವಾರ್ತೆ

ಅಂಕೋಲಾದ ಪ್ರಸಿದ್ಧ ‘ನಾಯಕ್ ಕೋಲ್ಡ್ ಡ್ರಿಂಕ್ಸ್’ ಮಾಲೀಕರು ಹಾಗೂ ನನ್ನ ಅತ್ಯಂತ ಆತ್ಮೀಯರೂ ಆದ ಮಾರುತಿ ಕೇಶವ ನಾಯಕ್ ಅವರ ನಿಧನದ ವಾರ್ತೆ ಕೇಳಿ ತುಂಬಾ ದುಃಖವಾಗಿದೆ.ಎಂದು ಸಂಸದ ರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಂಬನಿ ಮಿಡಿದಿದ್ದಾರೆ

​ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನಿಷ್ಠಾವಂತ ಕಾರ್ಯಕರ್ತರಾಗಿ, ದೇಶಪ್ರೇಮ ಹಾಗೂ ನಿಸ್ವಾರ್ಥ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡಿದ್ದ ಅಪರೂಪದ ವ್ಯಕ್ತಿತ್ವದವರಾಗಿದ್ದರು. ಪಕ್ಷದ ಸಂಘಟನೆ, ಸಾಮಾಜಿಕ ರಂಗ ಹಾಗೂ ಸಾರ್ವಜನಿಕ ಆರೋಗ್ಯ ಜಾಗೃತಿಯಲ್ಲಿ ಅವರು ವಹಿಸುತ್ತಿದ್ದ ಶ್ರದ್ಧೆ ಎಲ್ಲರಿಗೂ ಮಾದರಿಯಾಗಿತ್ತು. ಅವರ ಸರಳತೆ ಮತ್ತು ಸೌಮ್ಯ ಸ್ವಭಾವ ಸದಾ ಸ್ಮರಣೀಯ.

​ಅವರ ಅಗಲಿಕೆಯಿಂದ ನನಗೆ ಒಬ್ಬ ಆತ್ಮೀಯ ಸ್ನೇಹಿತನನ್ನು ಹಾಗೂ ಸಮಾಜವು ಒಬ್ಬ ಧೀಮಂತ ಕಾರ್ಯಕರ್ತನನ್ನು ಕಳೆದುಕೊಂಡಂತಾಗಿದೆ. ಇದು ನಮಗೆಲ್ಲರಿಗೂ ತುಂಬಲಾರದ ನಷ್ಟ.
​ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಹಾಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ ಮತ್ತು ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.ಎಂದು
ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರು ಉತ್ತರ ಕನ್ನಡ ಅವರು ದುಃಖ ವ್ಯಕ್ತ ಪಡಿಸಿದ್ದಾರೆ.