ಸುದ್ದಿ ಕನ್ನಡ ವಾರ್ತೆ

ಜೋಯಿಡಾ:, ಒಂದೇ ಒಂದು ದಿನ ಮಳೆ ಬಂದರೆ ಸಾಕು ಜೋಯಿಡಾ ತಾಲೂಕಾ ಕೇಂದ್ರ ಕ್ಕೆ ವಿದ್ಯುತ್ ನಿಲ್ಲೋದಿಲ್ಲ, ಇದು ತಾಲೂಕಿನ ಜನತೆಗೆ ಏನೂ ಹೊಸತಲ್ಲ ಆದರೆ ವಿದ್ಯುತ್ ಇಲಾಖೆ ಮಾತ್ರ ಇದರ ಬಗ್ಗೆ ಯೋಚನೆ ಮಾಡಬೇಕು, ತಾಲೂಕಾ ಕೇಂದ್ರದ ಸ್ಥಿತಿಯೇ ಹೀಗಾದರೆ ಗ್ರಾಮೀಣ ಹಳ್ಳಿಗರ ಸ್ಥಿತಿ ಏನಾಗಿರಬಹುದು. ಮಂಗಳವಾರ ಬಿದ್ದ ಮಳೆಗೆ ತಾಲೂಕಾ ಕೇಂದ್ರ ದಲ್ಲಿಯೇ ವಿದ್ಯುತ್ ನಿಲ್ಲುತಿಲ್ಲ, ಹೀಗಾಗಿ ಜೋಯಿಡಾ ಬಾಗ ಪೂರ್ತಿಯಾಗಿ ಕತ್ತಲೆ ಯಲ್ಲಿ ಕಳೆಯಿತು.

ಪ್ರತಿ ಕ್ಸಣವೂ ವಿದ್ಯುತ್ ಇಲ್ಲದೇ ದಿನ ನಡೆಯದ ಕಾಲವಿದು ಹೀಗಾದರೆ ಹೇಗೆ,,,??ಕಳೆದ 40 ವರ್ಷ ಗಳಿಂದ ತಾಲೂಕಾ ಕೇಂದ್ರ ವಾಗಿ ಜೋಯಿಡಾ ದಲ್ಲಿ ಕಾರ್ಯ ನಡೆಯುತ್ತಿದೆ, ನಿರಂತರ ವಿದ್ಯುತ್ ಇರುವಂತೆ ಸರಿಯಾದ, ಮಾರ್ಗ ಯಾಕೆ ಆಗುತ್ತಿಲ್ಲ, ಎನ್ನುವುದು ಸಾರ್ವಜನಿಕ ರ ಪ್ರಶ್ನೆಯಾಗಿದೆ, ಇದಕ್ಕೆಲ್ಲ ಇಲಾಖೆಯವರ, ನಿರಾಸಕ್ತಿ, ಕಾರಣವೇ, ಅಥವಾ ಈ ರೀತಿ ಯಾಗುತ್ತಾ ಇದ್ದರೆ, ಇಲಾಖೆಯವರಿಗೆ ಮತ್ತು ಗುತ್ತಿಗೆ ದಾರರಿಗೆ, ಏನೋ, ಇದೆಯೇ ಎಂಬ ಅನುಮಾನ ಸಹಜ ಬರುತ್ತದೆ, ಪಕ್ಕದಲ್ಲಿಯೇ ವಿದ್ಯುತ್ ಉತ್ಪಾದನೆ ಆಗಿ ಬೇರೆ ಬೇರೆ ಜಿಲ್ಲೆ ಮತ್ತು ರಾಜ್ಯ ಗಳಿಗೆ ನಿರಂತರ ಪೂರೈಕೆ ಆದರೂ ದೀಪದ ಬುಡದಲ್ಲಿ ಕತ್ತಲೆ ಎಂಬಂತಾಗಿದೆ.

ಈ ಬಗ್ಗೆ ಸೂಕ್ತ ಕೆಲಸ ಮಾಡುವ ಇಚ್ಛೆ ಹೆಸ್ಕಾ0 ನವರಿಗೆ ಬೇಕಾಗಿದೆ. ಗಣೇಶ್ ಗುಡಿ ಯಿಂದ ಅಂಡರ್ ಗ್ರೌಂಡ್ ಕೇಬಲ್ ಹಾಕಿ ತಾಲೂಕಾ ಕೇಂದ್ರ ಮತ್ತು ಗ್ರಾಮೀಣ ಹಳ್ಳಿ ಗಳಿಗೆ ವಿದ್ಯುತ್ ನೀಡುವ ಬಗ್ಗೆ ಪ್ರಸ್ತಾವನೆ ಯನ್ನು ಸರಕಾರಕ್ಕೆ ಕಳಿಸುತ್ತಲೇ ಇದ್ದಾಗ ಸರಕಾರ ಕೂಡ ಒಪ್ಪಿಗೆ ನೀಡುತ್ತದೆ. ಇದರಿಂದ ಪ್ರತಿವರ್ಷ ವಿದ್ಯುತ್ ಇಲಾಖೆ ತಾಲೂಕಿನ ವಿದ್ಯುತ್ ಅವಘಡ ಗಳಿಗೆ ಖರ್ಚು ಮಾಡುವ ಕೋಟ್ಯಂತರ ರೂಪಾಯಿ ಗಳು, ಜನರಿಗೆ ಆಗುವ ತೊಂದರೆ ಗಳು ಕೆಲಸ ಗಾರರ ಸಮಸ್ಯೆ ಉಳಿದು ಜನತೆಗೆ ನೆಮ್ಮದಿ ಸಿಗುತ್ತದೆ, ವಿದ್ಯುತ್ ಅವಘಡ ಗಳಿಂದ ಕಾಡು ಪ್ರಾಣಿಗಳ, ದನಕರುಗಳ, ಜನರ ಜೀವ ಹಾನಿ ಕೂಡ ತಪ್ಪುತ್ತದೆ, ಇದನ್ನು ಸರಿಯಾಗಿ ಇಲಾಖೆ ಮನವರಿಕೆ ಮಾಡಿ ಕೊಟ್ಟರೆ, ಯಾವುದೇ ಸರಕಾರ ವ್ಯವಸ್ಥಿತ ಯೋಜನೆ ಗಳಿಗೆ ಅನುಮೋದನೆ ಕೊಡುತ್ತದೆ.

ಈ ಬಗ್ಗೆ ತಾಲೂಕಿನ ಜನಪ್ರತಿನಿದಿನಗಳು ಹೆಚ್ಚಿನ ಆಸಕ್ತಿ ವಹಿಸಿ ಅಧಿಕಾರಿಗಳಿಗೆ ಸೂಚಿಸುತ್ತಲೇ ಇದ್ದರೆ ಮಾತ್ರ ಸಾಧ್ಯ ಎಂಬ ಮಾತುಗಳು ಹರಿದಾಡುತ್ತಿವೆ, ಬರುವ ಮಳೆಗಾಲ ದಲ್ಲಿ ಆದರೂ ಸರಿಯಾಗಿ ವಿದ್ಯುತ್ ಜನತೆಗೆ ಸಿಗುವ ಹಾಗೆ ಇಲಾಖೆ ಕ್ರಮ ಕೈ ಕೊಳ್ಳಲಿ ಎಂದು ಜನರು ಆಗ್ರಹಿಸಿದ್ದಾರೆ ನಿನ್ನೆ ಹೋಗಿರುವ ವಿದ್ಯುತ್ ಇದು ವರೆಗೂ( ಬೆಳಿಗ್ಗೆ 10 ಘಂಟೆ )ಇಲ್ಲ.