ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಮುಂದಿನ ದಿನಗಳಲ್ಲಿ 39 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಗ್ರಾಮ ಪಂಚಾಯತ್ ದಿಂದ ಮಾಹಿತಿ ಗುರುತಿಸಲಾಗಿದೆ. ಈ ಗ್ರಾಮ ಗಳ ಮೇಲೆ ನೀಗಾ ಇಡಲಾಗಿದೆ.
ಇರುವ ನೀರನ್ನು ಕುಡಿಯಲು ಮಾತ್ರ ಬಳಸಿ, ಕೃಷಿ ಜಮೀನು, ತೋಟಗಳಿಗೆ ಬಿಡಬಾರದೆಂದು ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ ತಾಲೂಕಿನ ಜನತೆಯಲ್ಲಿ ಕೇಳಿಕೊಂಡಿದ್ದಾರೆ.
ಇತ್ತೀಚಿಗೆ ಅವರು ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾತನಾಡುತ್ತಿದ್ದರು ತಾಲೂಕಿನ ಬಹು ಭಾಗದ ಗ್ರಾಮಿಣ ಪ್ರದೇಶದಲ್ಲಿ. ನೈಸರ್ಗಿಕವಾಗಿ ಹರಿಯುವ ನೀರು ಕುಡಿಯಲು ಬಳಸಲಾಗುತ್ತದೆ. ಝರಿ. ನೀರು ಹರಿಯುವ ಪ್ರಮಾಣ ಬೇಸಿಗೆಯಲ್ಲಿ ಕಡಿಮೆ ಯಾಗುತ್ತದೆ. ಕಾಲುವೆ ಮೂಲಕ ನೀರು ಹರಿದು ಬರುವ ಪ್ರಮಾಣ ಬೇಸಿಗೆಯಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗಲಿದೆ. ಹೀಗಾಗಿ ನೀರಿನ ಬಳಕೆ ಪ್ರಮಾಣ ಹಿತ ಮಿತ ವಾಗಿ ಮಾಡಬೇಕು ಎಂದರು.
ಜೊಯಿಡಾ ತಾಲೂಕಾ ಕೇಂದ್ರಕ್ಕೆ ಈಗಾಗಲೇ ಹುಡಸಾ, ಧುಪಾರಾಯಿ ಕುಡಿಯುವ ನೀರು ಯೋಜನೆ ಮತ್ತು ಕಿರು ಯೋಜನೆಗಳ ಮೂಲಕ ನೀರು ಕುಡಿಯಲು ಬಳಸಲಾಗುತ್ತದೆ. ಈ ಯೋಜನೆಗಳಲ್ಲಿ ನೀರಿನ ಮಟ್ಟ ಕಡಿಮೆ ಯಾಗಿದೆ. ಇದರಿಂದ ತಾಲೂಕಾ ಕೇಂದ್ರಕ್ಕೆ ಕುಡಿಯುವ ನೀರಿನ ಪ್ರಮಾಣ ಕಡಿಮೆ ಯಾಗುತ್ತಿದೆ. ಜನತೆಗೆ ಗ್ರಾಮ ಪಂಚಾಯತ್ ಮೂಲಕ ನೀರು ಬಿಡಲಾಗುತ್ತದೆ. ತಾಲೂಕಾ ಕೇಂದ್ರದಲ್ಲಿ ವಾಸಿಸುವ ಜನರಿಗೆ ಕುಡಿಯಲು ನೀರು ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬರುವ ಒಂದು ತಿಂಗಳಲ್ಲಿ ಇರುವ ನೀರನ್ನು ಕುಡಿಯಲು ಬೆಳಸಬೇಕಾಗಿದೆ.
ಅಗತ್ಯ ಇರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಲುಕ್ರಮಕೈಗೊಳ್ಳಲಾಗುವುದು ಎಂದರು
ಜೊಯಿಡಾ ತಾಲೂಕಾ ಕೇಂದ್ರಕ್ಕೆ ಕುಡಿಯುವ ನೀರು ಪೂರೈಸಲು ರೂಪುಗೊಂಡ ನಗರಿ ಮಾಂಡೆಥಳ ಯೋಜನೆ ಈಗಾಗಲೇ ನ್ಯಾಯಾಲಯ ಮೆಟ್ಟಿಲೇರಿದೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ಯೋಜನೆ ಅಪೂರ್ಣ ಗೊಂಡಿದೆ. ಸಂಬಂಧಿತ ಇಲಾಖೆಗಳಿಂದ ನ್ಯಾಯಾಲಯದಲ್ಲಿ ಅರ್ಜಿ ಹಾಕಲಾಗಿದೆ. ಇತ್ಯರ್ಥ ಆದರೆ ಜೊಯಿಡಾ ಕುಡಿಯುವ ನೀರಿನ ಸಮಸ್ಯೆ ವಾಸ್ತವವಾಗಿ ಪರಿಹಾರ ಆಗಲಿದೆ.ಗ್ರಾಮಿಣ ಪ್ರದೇಶದಲ್ಲಿ ತುಂಬಾ ಅಗತ್ಯ ಇರುವ ಕಡೆ ಭಾವಿ ಆಳ ಮಾಡುವುದು, ಬೋರ್ ವೆಲ್ ಬೂಸಿಂಗ ಮಾಡಲು ಕುಡಿಯುವ ನೀರು ಇಲಾಖೆ ಮತ್ತು ಗ್ರಾಮ ಪಂಚಾಯತ್ ಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು
ಸೂಪಾ ಡ್ಯಾಂ ಯೋಜನೆಯ ಪುನರ್ ವಸತಿ ಕೇಂದ್ರವಾದ ರಾಮನಗರದಲ್ಲಿ ಕುಡಿಯುವ ನೀರು ಯೋಜನೆ ಇನ್ನೂ ಸರಿಯಾಗಿ ಆಗಿಲ್ಲ ರೂ. 28 ಕೋಟಿ ವೆಚ್ಚದ ಯೋಜನೆ ಮೂರು ವರ್ಷ ಗಳಿಂದ ಪ್ರಗತಿಯಲ್ಲಿದೆ. 15 ದಿನಕ್ಕೊಮ್ಮೆ ಕುಡಿಯುವ ನೀರಿನ ಭಾಗ್ಯ ರಾಮನಗರ ಜನರಿಗೆತಪ್ಪಿಲ್ಲ .ಇದು ಕಾಳಿ ನದಿಯಿಂದ ನಿರಾಶ್ರಿತ ರಾದ ಜನತೆಗೆ ಸರಕಾರ ನೀಡಿದ ಕೊಡುಗೆಯೇ ಎಂಬಂತಿದೆ.
