ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ನಂದಿಗದ್ದೆ ಯಲ್ಲಿರುವ ಬಿ ಎಸ್ ಎನ್ ಎಲ್ ಟವರ್ ಕಳೆದ 10 ವರ್ಷ ಗಳಿಂದ ಇದ್ದೂ ಇಲ್ಲ ದಂತಾಗಿದೆ, ಇದರಿಂದ ಸ್ಥಳೀಯರು ಓಟಿಪಿ ಪಡೆಯಲು ಹರ ಸಾಹಸ ಪಡುವಂತಾಗಿದೆ, ದಯಮಾಡಿ ನಮಗೆ ಬೇರೆ ವ್ಯವಸ್ಥೆ ಯನ್ನಾದರೂ ಮಾಡಿಕೊಡಿ ಇಲ್ಲ ವೆಂದಾದರೆ ಈ ಟವರ್ ಕಿತ್ತುಕೊಂಡು ಹೋಗಿ ಕೇಂದ್ರ ಸರಕಾರಕ್ಕೆ ಉಳಿತಾಯ ವಾದರೂ ಮಾಡಿಕೊಡಿ ಎಂದು ಸಾರ್ವಜನಿಕರು, ಸಂಸದ ಕಾಗೇರಿ ಅವರಲ್ಲಿ ಈ ಮೂಲಕ ಆಗ್ರಹಿಸಿದ್ದಾರೆ.

 

ನಂದಿಗದ್ದೆ ಯಲ್ಲಿರುವ ಬಿ ಎಸ್ ಎನ್ ಎಲ್ ಕೇಂದ್ರ, ಇದ್ದೂ ಇಲ್ಲದ ತರ ಇದೆ, ಪಕ್ಕದಲ್ಲಿ ಇರುವ ಗ್ರಾಮ ಪಂಚಾಯತ ಕ್ಕೆ ಕೆಲಸಕ್ಕೆ ಹೋದರೆ ಓಟಿಪಿ ಸಿಗುತ್ತಿಲ್ಲ, ಗ್ಯಾಸ್ ಅಂಗಡಿಗೆ ಹೋಗಿ, ಟವರ್ ನೋಡುತ್ತಾ, ದೂರವಾಣಿ ಕರೆ ಮಾಡಲು ನೆಟ್ವರ್ಕ್ ಸಿಗುತ್ತಿಲ್ಲ, ಒಂದು ಓಟಿಪಿ ಪಡೆಯಲು ನಂದಿಗದ್ದೆಯಲ್ಲಿ ಸಾಧ್ಯವಿಲ್ಲ, ಬಿ ಎಸ್ ಎನ್ ಎಲ್ ಟವರ್ ದಷ್ಟು ಎತ್ತರದ ಗುಡ್ಡಕ್ಕೆ ಹತ್ತಿ ಹರಾಸಾಹಸ ಮಾಡಿದರೂ ನೆಟ್ವರ್ಕ್ ಸಿಗುತ್ತಿಲ್ಲ, ನಂದಿಗದ್ದೆ ಟವರ್ ನೆಟ್ವರ್ಕ್ ಹುಡುಕುವವರಿಗೆ ಅಪರೂಪದಲ್ಲಿ ಅಂಬಿಕಾನಗರದ ಪಕ್ಕದಲ್ಲಿ ಇರುವ ಸಾಂಗ್ರೆಲಿ ಟವರ್ ನೆಟ್ವರ್ಕ್ ಸಿಗುವ ಕಾರಣ ವಿವಿಧ ಕೆಲಸದಲ್ಲಿ ಇರುವ ಜನರು, ಹೇಗೋ ಓಟಿಪಿ ಕಷ್ಟ ಪಟ್ಟು ದಿನಗಳ ಕಾಲ ಕಾಯ್ದು ಪಡೆಯುತ್ತಿದ್ದಾರೆ,ನೆಟ್ವರ್ಕ್ ಸಮಸ್ಯೆ ಇಂದ ಬಳಲುವ ಜನತೆಗೆ ರಾಜ್ಯ ಸರಕಾರ ಕಾಳಜಿ ವಹಿಸದೆ ಕೇಂದ್ರ ದ ಮೇಲೆ ಹಾಕುತ್ತಿದೆ, ಹಾಗಾಗಿ ಕಾಗೇರಿ ಯವರೇ ನೀವು ನಮಗೆ ಬಿ ಎಸ್ ಎನ್ ಎಲ್ ಸಮಸ್ಯೆ ಯನ್ನು ಬಗೆ ಹರಿಸಿ ಕೊಡಿ ಎಂದು ಜೋಯಿಡಾ ಜನತೆ ಆಗ್ರಹಿಸಿದ್ದಾರೆ . ಈಗ ಎಲ್ಲ ಕೆಲಸ ಗಳಿಗೂ ಓಟಿಪಿ ಬೇಕೇ ಬೇಕು ಗ್ರಾಮ ಪಂಚಾಯತ್ ಕ್ಕೂ ಸರಿಯಾಗಿ ನೆಟ್ವರ್ಕ್ ಬಾರದ ಟವರ್ ಇದ್ದೂ ಪ್ರಯೋಜನ ವಿಲ್ಲ, ಆದ್ದರಿಂದ ನಂದಿಗದ್ದೆ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಕೂಡಲೇ ಸರಕಾರಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ತ್ವರಿತ ವಾಗಿ ಮಾಹಿತಿ ಕೊಟ್ಟು ಬಿ ಎಸ್ ಎನ್ ಎಲ್ ಟವರ್ ಬದಲಾವಣೆ ಮಾಡಿ ಹೊಸ ಟವರ್ ಆದರೂ ನಂದಿಗದ್ದೆ ಬಿಟ್ಟು ಚಿಂಚಖಂಡ ದಲ್ಲಿ ಮಾಡುವ ಮೂಲಕ ಸಾರ್ವಜನಿಕ ರಿಗೆ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಡುವಂತೆ ಕೇಳಿಕೊಳ್ಳಲು ಆಗ್ರಹಿಸಿದ್ದಾರೆ.

 

ಸ್ವಯಂ ಚಾಲಿತ ಟವರ್ ನಿಂದಲಾದರೂ ಜನತೆಗೆ ನೆಟ್ವರ್ಕ್ ಮತ್ತು ಕೂಡಲೇ ಓಟಿಪಿ ಸಿಗಬಹುದು ಎಂಬ ನಂಬಿಕೆ ಜನತೆಯದಾಗಿದೆ. ಒಟ್ಟಾರೆ ಇದ್ದೂ ಇಲ್ಲದಂತೆ ಇರುವ ನಂದಿಗದ್ದೆ ನೆಟ್ವರ್ಕ್ ಟವರ್ ಕೇಂದ್ರ ಸರಕಾರಕ್ಕೆ ಹೊರೆ, ಅದು ಕಡಿಮೆ ಯಾದರೆ, ಬದಲಿ ವ್ಯವಸ್ಥೆಯಾದರೂ ಆಗುವ ನಿರೀಕ್ಷೆ ಜನತೆಯದಾಗಿದೆ. ಹಾಗಾಗಿ ಸಂಸದ ಕಾಗೇರಿ ಯವರಿಗೆ, ಕೂಡಲೇ ನೆಟ್ವರ್ಕ್ ಸಮಸ್ಯೆಗೆ ಪರಿಹಾರ ನೀಡಿ ಎಂದು,ಸಾರ್ವಜನಿಕರು ಆಗ್ರಹಿಸಿದ್ದಾರೆ.