ಸುದ್ದಿ ಕನ್ನಡ ವಾರ್ತೆ
ಜೋಯಿಡಾದ ಕಾಳಿ ನದಿಯಿಂದ ಹಳಿಯಾಳಕ್ಕೆ ಪೈಪ ಮೂಲಕ ಹರಿಯುವ ನೀರು ದಾಂಡೇಲಿ ಹಳಿಯಾಳ ಮದ್ಯೆ ಪೈಪ ಒಡೆದು ಪೋಲಾಗುತ್ತಿರುವ ದೃಶ್ಯ ರಸ್ತೆ ಯಲ್ಲಿ ಓಡಾಡುವ ಸಾರ್ವಜನಿಕ ರಿಗೆ ಕಂಡು ಬಂದಿದೆ.

ಜೋಯಿಡಾ ತಾಲೂಕಿನಲ್ಲಿ ಕಾಳಿ ನದಿ ಹರಿದು ಹೋದರೂ, ತಾಲೂಕಿನ ಜನತೆ ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ, ಎಲ್ಲಾ ಕಡೆ ನೀರಿಗೆ ಹಾ ಹಾ ಕಾರ ಎದ್ದಿದೆ, ಜನರ ಜೊತೆಗೆ, ಜಾನುವಾರು ಗಳು, ಕಾಡು ಪ್ರಾಣಿಗಳು ನೀರಿಲ್ಲದೇ ಒದ್ದಾಡುವ ಸ್ಥಿತಿ ಬಂದಿದೆ, ಆದರೂ ಜೋಯಿಡಾ ಜನತೆಗೆ ಕುಡಿಯುವ ನೀರು ಕೊಡದೇ ರಾಜಕೀಯ ಪಕ್ಷಗಳು, ಹೊರಗೆ ನೀರನ್ನು ಕೊಡುತ್ತಿರುವುದರ ಬಗ್ಗೆ ಸಾರ್ವಜನಿಕ ರು, ನೀರು ಎಂಬ ಕಾರಣಕ್ಕೆ ಮೌನ ಮುರಿಯುತ್ತಿಲ್ಲ,ತಾಲೂಕಿಗೆ ಪ್ರತಿವರ್ಷ ಕುಡಿಯುವ ನೀರಿಗಾಗಿ ಕೋಟಿ ಕೋಟಿ ಅನುದಾನ ಬಂದರೂ ಕುಡಿಯುವ ನೀರು ಇಲಾಖೆ ಮತ್ತು ಗ್ರಾಮ ಪಂಚಾಯತ್ ಗಳು ಸರಿಯಾದ, ರೂಪು ರೇಷೆ ಮಾಡದೇ ಬಂದ ಹಣ ಖರ್ಚು ಮಾಡುತ್ತಲೇ ಇರುವ ಕಾರಣ ಸುಪಾ ಮುಳುಗಡೆಯಾಗಿ ನಲವತ್ತು ವರ್ಷ ಕಳೆದರೂ, ಜೋಯಿಡಾ ತಾಲೂಕು ಜನತೆಗೆ ನಿರಂತರ ಕುಡಿಯುವ ನೀರು ದೊರಕಿಲ್ಲ. ಕಳೆದ ಶುಕ್ರವಾರ ತಾಲೂಕಿನ ಅಭಿವೃದ್ಧಿ ಸಭೆ ನಡೆದಾಗ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಯಿತು, ಶಾಸಕರು ತಾಲೂಕಿನಲ್ಲಿ ಎಲ್ಲೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿ ಕೊಳ್ಳಿ, ಕುಡಿಯುವ ನೀರಿನ ಸಮಸ್ಯೆ ಆದರೆ ಸಂಬಂಧ ಪಟ್ಟ ಅಧಿಕಾರಿಗಳೇ ಹೊಣೆ ಗಾರರು ಎಂದು ಹೇಳಿದ್ದಾರೆ, ಆದರೆ ಕಳೆದ ನಾಲ್ಕು ದಿನಗಳಿಂದ ಅವೇಡಾ ಗ್ರಾಮ ಪಂಚಾಯತದ ಹಲವಾರು ಗ್ರಾಮ ಗಳಿಗೆ ನೀರು ಸರಿಯಾಗಿ ಹೋಗುತ್ತಿಲ್ಲ ಎಂದು ಮಾಜಿ ಗ್ರಾಮ ಪಂಚಾಯತ ಸದಸ್ಯರು ಆರೋಪಿಸಿದ್ದಾರೆ.
ಮಳೆಗಾಲ ದಲ್ಲಿ ತೊಂದರೆ ಇದ್ದಿದ್ದೇ, ಆಗ ಮಳೆ ನಿರಾದರೂ ಸಿಗುತ್ತದೆ, ಈಗ ಏನು ಮಾಡೋಣ ಎಂದು ಬಾಡಗುಂದ ಜನತೆ ಕೇಳುತ್ತಿದ್ದಾರೆ. ತಾಲೂಕಿನ ಜನತೆ ಕುಡಿಯುವ ನೀರು 24/7 ಸಿಗುವಂತೆ ಆಗಲು ಬರುವ ಗ್ರಾಮ ಪಂಚಾಯತ್ ಸೇರಿದಂತೆ ಎಲ್ಲ ಚುನಾವಣೆ ಗಳಲ್ಲೂ, ನೀರು ಕೊಡುವ ಭರವಸೆ ಪಡೆದೇ ಮತದಾನ ಮಾಡಬೇಕಾದ ಪರಿಸ್ಥಿತಿ ಬಂದಿದೆ.
