Banner Ad

ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ಕುಂಬಾರವಾಡದಲ್ಲಿರುವ ರೈಸ್ ಮಿಲ್ ಒಂದರ ಮೇಲ್ಬಾವಣಿ ಒಡೆದು ಒಳನುಗ್ಗಿದ ಕಳ್ಳರು ನಗದು ಹಣವನ್ನು ದೋಚಿರುವ ಘಟನೆ ನಡೆದಿದೆ.


ಕುಂಬಾರವಾಡದ ನಿವಾಸಿ ಗುರುರಾಜ ಚಂದ್ರಶೇಖರ ಬಂಗಾರೆ ಅವರಿಗೆ ಸೇರಿದ ರೈಸ್ ಮಿಲ್‌ನಲ್ಲಿ ಈ ಕಳ್ಳತನ ಸಂಭವಿಸಿದೆ. ಮಂಗಳವಾರ ರಾತ್ರಿ ಈ ಕಳ್ಳತನ ನಡೆದಿರುವ ಸಂಖ್ಯೆಯಿದ್ದು ಬುಧವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ರೈಸ್ ಮಿಲ್‌ನ ಮೇಲ್ಪಾವಣಿಯ ಸಿಮೆಂಟ್ ಶೀಟ್ ಒಡೆದು ಒಳಗೆ ಪ್ರವೇಶಿಸಿ ಮಿಲ್‌ನ ಕೌಂಟರ್‌ನಲ್ಲಿರುವ ಟೇಬಲ್ ಮೇಲೆ ಇಟ್ಟಿದ್ದ ಹಣದ ಡಬ್ಬಿಯನ್ನು ಕಳ್ಳರು ದೋಚಿದ್ದಾರೆ. ಡಬ್ಬಿಯಲ್ಲಿದ್ದ 24,500 ರೂ. ನಗದು ಹಣವನ್ನು ಡಬ್ಬಿ ಸಮೇತ ಕದ್ದೊಯ್ಯಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Banner Ad


ಬುಧವಾರ ಬೆಳಿಗ್ಗೆ ಮಾಲೀಕರು ಮಿಲ್‌ಗೆ ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಗುರುರಾಜ ಬಂಗಾರೆ ಅವರು ಜೋಯಿಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರಿದಿದೆ.

Banner Ad