ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿ ಮೊಬೈಲ್ ಟವರ್ ಗೆ ಪೋಲಿಸ್ ಬಂದೋಬಸ್ತ ಕಲ್ಪಿಸಲಾಗಿದೆ. ಹೌದು ಗೋವಾ ಸರ್ಕಾರವು ಗೋವಾದ ಹರಮಲ್ ಪಂಚಾಯತ ಕ್ಷೇತ್ರದಲ್ಲಿರುವ ಮೊಬೈಲ್ ಟವರ್ ಗೆ ಬಿಗಿ ಪೋಲಿಸ್ ಬಂದೋಬಸ್ತ ಕಲ್ಪಿಸಿದೆ. (The Goa government has provided heavy police presence at the mobile tower in Goa’s Haramal Panchayat Constituency).
ಗೋವಾ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ, ಇಲೆಕ್ಟ್ರಾನಿಕ್, ದೂರಸಂಚಾರ ನಿಗಮದ ವತಿಯಿಂದ ಹರಮಲ್ ನ ಭಂಡಾರವಾಡಾ ಪಾಲಯೆ ದಲ್ಲಿ ಪ್ರಾಥಮಿಕ ಉಪ ಆರೋಗ್ಯ ಕ್ಷೇಂದ್ರದ ಜಾಗದಲ್ಲಿ ನಿರ್ಮಿಸಲಾಗಿರುವ ಮೊಬೈಲ್ ಟವರ್ ಗೆ ಪಂಚಾಯತಿ ಮತ್ತು ಸ್ಥಳೀಯ ನಾಗರೀಕರ ತೀವ್ರ ವಿರೋಧವಿರುವ ಹಿನ್ನೆಲೆಯಲ್ಲಿ ಈ ಮೊಬೈಲ್ ಟವರ್ ಗೆ ಪೋಲಿಸ್ ಬಂದೋಬಸ್ತ ಕಲ್ಪಿಸಲಾಗಿದೆ.
ಇಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಪಂಚಾಯತಿಯ ವಿರೋಧ ಇದ್ದರೂ ಕೂಡ ಠರಾವು ಸಮ್ಮತಿಸಿಕೊಂಡು ಈ ಟವರ್ ನಿರ್ಮಿಸಲು ಯಾರ ಕೈವಾಡವಿದೆ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.