ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಶ್ರೀ ಮಾರುತಿ ದೇವರ ಜಾತ್ರಾ ಉತ್ಸವ ದಿನಾಂಕ:02-04-2026 ರ ಗುರುವಾರರಂದು ನಡೆಯಲಿದೆ.

ಜಾತ್ರಾಉತ್ಸವದ ನಿಮಿತ್ತ ಬೆಳಿಗ್ಗೆ 8:00 ಗಂಟೆಗೆ ಶ್ರೀ ಮಾರುತಿ ದೇವರ ತೊಟ್ಟಿಲು ಕಾರ್ಯಕ್ರಮ, ಮಧ್ಯಾಹ್ನ 11:00 ಗಂಟೆಗೆ ಶ್ರೀ ಮಾರುತಿ ದೇವರ ಮಹಾಪೂಜೆ ಮತ್ತು ಶ್ರೀ ಸತ್ಯನಾರಾಯಣ ದೇವರ ಮಹಾಪೂಜಾ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ.ಎಲ್ಲಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ.

ಮಧ್ಯಾಹ್ನ(ಮಹಾಪ್ರಸಾದ)ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 08:00 ಗಂಟೆಗೆ ಮಕ್ಕಳ ಮನರಂಜನಾ ಕಾರ್ಯಕ್ರಮ, ನಂತರ 9:30 ಕ್ಕೆ ಶ್ರೀ ದೇವರ ಫಲಾಪಲಾವಳಿಗಳ ಸವಾಲ್ ಕಾರ್ಯಕ್ರಮ ನಡೆಯಲಿದೆ.ಭಕ್ತರ ವಿಶೇಷ ಮನರಂಜನೆಗಾಗಿ ರಾತ್ರಿ11:30 ಗಂಟೆಗೆ ಶ್ರೀ ಮಾರುತಿ ನಾಟ್ಯ ಮಂಡಲ ವಿರ್ನೋಲಿಯ ಕಲಾವಿದರಿಂದ ಅರ್ಪಿಸುವ ಶ್ರೀ ಡಿ.ಆರ್ ಪೂಜೇರ್ ವಿರಚಿತ ಧರ್ಮದ ನುಡಿ ಬೆಂಕಿಯ ಕಿಡಿ ಅರ್ಥಾತ:ಅನಾಥ ಕಟ್ಟಿದ ಅರಿಷಿಣದ ತಾಳಿ ‘ಎಂಬ ಸುಂದರ ಸಾಮಾಜಿಕ ನಾಟಕದ ಪ್ರದರ್ಶನ ನಡೆಯಲಿದೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಹನುಮಾನ ದೇವಸ್ಥಾನ ಸಮಿತಿ ಮತ್ತು ಊರ ನಾಗರೀಕರು ವಿರ್ನೋಲಿ ವಿನಂತಿಸಿಕೊಂಡಿದ್ದಾರೆ.