ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ಎಲ್ಲೆಡೆ ಸ್ವಚ್ಛತೆಯ ಅಭಿಯಾನ ಬಿರುಸಿನಿಂದ ಸಾಗಿದೆ ಬೆಳಿಗ್ಗೆ 6 ಘಂಟೆ ಯಿಂದ ಮದ್ಯಾಹ್ನ 12ಘಂಟೆಯ ವರೆಗೆ ಸ್ವಚ್ಛತೆಯ ಕೆಲಸ ನಡೆಯುತ್ತಿದೆ.
ನಾಳೆಯೂ ಕೂಡ ಸ್ವಚ್ಛತಾ ಕೆಲಸ ಮದ್ಯಾಹ್ನ 12ಘಂಟೆಯ ವರೆಗೆ ನಡೆದು ಮುಕ್ತಾಯ ವಾಗಲಿದೆ, ಕ್ಷೆತ್ರದ ಶಾಸಕರು ರಾಜ್ಯ ಆಡಳಿತ ಸುಧಾರಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಆರ್ ವಿ ದೇಶಪಾಂಡೆ ಅವರ ಕನಸಿಗೆ ಜನತೆ ತಮ್ಮ ಸಹಕಾರ ನೀಡಿದ್ದಾರೆ, ಸ್ವಚ್ಛತೆ ಯಿಂದ ಜನ ಸಾಮಾನ್ಯರ ಆರೋಗ್ಯ ಸುಧಾರಿಸಿ ಕ್ಷೆತ್ರದ ಜನತೆ ಆರೋಗ್ಯ ವಾಗಿರಲಿ ಎಂಬ ಸೂಚನೆ ಎಲ್ಲರೂ ಮೆಚ್ಚಲೇ ಬೇಕು, ಈ ಬಗ್ಗೆ ಜೋಯಿಡಾ ದಲ್ಲಿ ಮಾತನಾಡಿದ ಆರ್ ವಿ ದೇಶಪಾಂಡೆ ಅವರು ಸ್ವಚ್ಛತೆ ಯಿಂದ ಆಗುವ ಲಾಭ ಗಳನ್ನು ವಿವರಿಸಿ ಮನುಷ್ಯನು ಇನ್ನೂ ಹತ್ತು ವರ್ಷ ಗಳ ಕಾಲ ಹೆಚ್ಚು ಬದುಕಲು ಆರೋಗ್ಯ ಮುಖ್ಯ ಅದನ್ನು ನಾವು ಪಡೆಯ ಬೇಕೆಂದರೆ ಆರೋಗ್ಯ ಪೂರ್ಣವ್ಯವಸ್ಥೆ ಯ ಸಮಾಜ ನಿರ್ಮಾಣ ವಾಗಬೇಕು ಇದನ್ನೆಲ್ಲ ಸರಕಾರ ಮಾಡುತ್ತದೆ ಎಂದು ನೋಡಬಾರದು ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ತಮ್ಮ ಪರಿಸರ ಉತ್ತಮ ವಾಗಿಟ್ಟು ಕೊಂಡು ತಮ್ಮ ಆರೋಗ್ಯ ಕಾಪಾಡಿ ಕೊಳ್ಳಲು ಸಲಹೆ ನೀಡಿದರು ಕಳೆದ ಹಲವಾರು ವರ್ಷ ಗಳಿಂದ ನಾನು ಸ್ವಚ್ಛತೆ ಬಗ್ಗೆ ಕಾರ್ಯಕ್ರಮ ನಡೆಸುತ್ತಿದ್ದೇನೆ ಆದರೆ ಈ ವರ್ಷ ನನ್ನ ಕ್ಷೆತ್ರದ ಎಲ್ಲ ಕಡೆಯು ಒಂದೇ ಬಾರಿಗೆ ಸ್ವಚ್ಛತೆ ನಡೆಯಲಿ ಎಂಬ ಕಾರಣಕ್ಕೆ ಈ ವ್ಯವಸ್ಥೆಯನ್ನು ಎಲ್ಲರ ಮತ್ತು ಸಂಘ ಸಂಸ್ಥೆ ಗಳ ನೆರವಿನಿಂದ ನಡೆಸಲಾಗುತ್ತಿದೆ,
ಇದು ರಾಜ್ಯ ದಲ್ಲಿಯೇ ಹೊಸ ಪ್ರಯೋಗ ಎಂದರು. ತಾಲೂಕಿನ ಎಲ್ಲಡೆ ನಡೆಯುತ್ತಿರುವ ಸ್ವಚ್ಛತೆ ಯನ್ನು ಪ್ರತಿದಿನದ ಒಂದು ಭಾಗವಾಗಿ ನಡೆಸಿಕೊಂಡು ಹೋಗಿ ತಮ್ಮ ಆರೋಗ್ಯ ಕಾಪಾಡಿ ಕೊಳ್ಳಲು ದೇಶಪಾಂಡೆ ಅವರು ಸಲಹೆ ನೀಡಿದರು ಹಾಗೆ ಮಾಡಿದಾಗ ಗಾಂಧೀಜಿ ಮತ್ತು ವಿನೋಬ ಬಾವೆ ಯವರ ಕನಸು ನನಸಾಗುತ್ತದೆ ಎಂದು ಹೇಳುವ ಮೂಲಕ ಜನ ಜಾಗೃತಿ ಮೂಡಿಸಿದ್ದಾರೆ
