ಸುದ್ದಿ ಕನ್ನಡ ವಾರ್ತೆ
ಜೊಯಿಡಾ; ತಾಲೂಕಿನ ರಾಮನಗರ ಕಲ್ಲು ಕ್ವಾರಿ ಗಳಿಂದ ಜೆಲ್ಲಿ ಹೊತ್ತು ಸಾಗುವ ಹತ್ತಾರು ಟಿಪ್ಪರ್ ಗಳು ಹಗಲು ರಾತ್ರಿ ಎನ್ನದೆ ಸಂಚಾರ ಮಾಡುತ್ತಿವೆ, ರಾಮನಗರದಿಂದ ಕಾರವಾರ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತೊಂದರೆ ಇರುವ ಬಗ್ಗೆ ಸಾಕಷ್ಟು ದೂರುಗಳಿವೆ. ಹಗಲಿನಲ್ಲಿ ಸಂಚಾರ ಮಾಡುವುದು ನಿಲ್ಲಿಸುವಂತೆ ತಹಶಿಲ್ದಾರ, ಲೋಕೋಪಯೋಗಿ ಇಲಾಖೆ ಹಾಗೂ ಪೋಲಿಸರಿಗೆ ಕಟ್ಟು ನಿಟ್ಟಾಗಿ ಸೂಚಿಸಿ, ಇಲ್ಲದಿದ್ದರೆ ಜಿಲ್ಲಾಧಿಕಾರಿಗೆ ಹೇಳಿ ಟಿಪ್ಪರ್ ಗಳು ಸಿಜ್ ಮಾಡಬೇಕಾಗುತ್ತದೆ ಎಂದು ಶಾಸಕ ಆರ್ ವಿ ದೇಶಪಾಂಡೆ ಅಧಿಕಾರಿಗಳನ್ನು ಎಚ್ಚರಿಸಿದ ಘಟನೆ ಶನಿವಾರ ನಡೆದಿದೆ.
ರಾಮನಗರದಲ್ಲಿ ಇರುವ ಕಲ್ಲು ಕ್ವಾರಿಗಳಿಂದ ಖಡಿ ತುಂಬಿದ ಭಾರಿ ಗಾತ್ರದ ಟಿಪ್ಪರ್ ಗಳು ಪ್ರತಿ ನಿತ್ಯ ಹಗಲು ರಾತ್ರಿ ಎನ್ನದೆ ಔರಾದ್ ಸದಾಶಿವ ಗಡ ಕಾರವಾರ, ರಾಮನಗರ ಮಾರ್ಗವಾಗಿ ಕೈಗಾಗೆ ಸಾಗಿಸಲಾಗುತ್ತಿದೆ. ಅಣಶಿ ಯಲ್ಲಿ ಔರಾದ್ ಸದಾಶಿವಗಡ ರಾಜ್ಯ ಹೆದ್ದಾರಿ 34 ರ ಕೆಲಸ ಪ್ರಗತಿಯಲ್ಲಿದೆ, ಭಾರಿ ಗಾತ್ರದ ಟಿಪ್ಪರ್ ಗಳ ಸಂಚಾರದಿಂದ ರಸ್ತೆ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಭಾರಿ ಗಾತ್ರದ ಟಿಪ್ಪರ್ ಗಳಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ. ಟಿಪ್ಪರ್ ಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಖಡಿ ತುಂಬುತಿದ್ದರಿಂದ ರಸ್ತೆಯ ತಿರುವಿನಲ್ಲಿ ಖಡಿ ಬಿದ್ದು ವಾಹನ ಸವಾರರಿಗೆ ತೊಂದರೆ ಇರುವ ಬಗ್ಗೆ ಸಾಕಷ್ಟು ದೂರುಗಳಿವೆ ಎಂದು ಶಾಸಕ ಆರ್ ವಿ ದೇಶಪಾಂಡೆ ಅಧಿಕಾರಿಗಳನ್ನು ಎಚ್ಚರಿಸಿದರು.
ಇನ್ನು ಮುಂದೆ ಯಾವುದೇ ಕಾರಣಕ್ಕೂ ಹಗಲಿನಲ್ಲಿ ಜೆಲ್ಲಿ ಹೊತ್ತು ಟಿಪ್ಪರ್ ಗಳು ರಸ್ತೆಗೆ ಇಳಿಯಬಾರದು. ರಾತ್ರಿ ಸಂಚಾರ ಮಾಡಬೇಕು. ಇದು ನನ್ನ ಆದೇಶ ಪಾಲಿಸದಿದ್ದರೆ ಜಿಲ್ಲಾಧಿಕಾರಿಗೆ ಸೂಚಿಸಲಾಗುತ್ತದೆ ಎಂದು ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಬಸವರಾಜ, ಪಿಎಸ್ಐ ಮಂಜುನಾಥ್ ಮಾಳಿ ಯವರಿಗೆ ಖಡಕ್ ಆದೇಶ ನೀಡಿದ್ದಾರೆ .
