Banner Ad

ಸುದ್ದಿ ಕನ್ನಡ ವಾರ್ತೆ
ಸಿದ್ದಾಪುರ:ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀಕ್ಷೇತ್ರ ಬೇಡ್ಕಣಿಯಲ್ಲಿ ಶ್ರೀಶನೈಶ್ಚರ ದೇವರ 7ನೇ ವರ್ಷದ ವರ್ಧಂತಿ ಉತ್ಸವ ಹಾಗೂ ಭವ್ಯ ಜಾತ್ರೋತ್ಸವವು ಮಾ. 26ರಿಂದ 28ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಲೂಕಿನ ಪ್ರಸಿದ್ದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ,ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿ ಯಶಸ್ವಿಗೊಳಿಸುವಂತೆ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ.26 ರಂದು ದೇವಾಲಯದಲ್ಲಿ ದೇವನಂದಿ, ಶನೇಶ್ವರ ಕಲಶಸ್ಥಾಪನೆ ಪೂಜೆ, ಜಪ, 27 ರಂದು ಕಲಾವೃದ್ಧಿ, ಮೃತ್ಯುಂಜಯ ಹೋಮ, ಪೂರ್ಣಹುತಿ, ಅಲಂಕಾರ, ನೈವೇದ್ಯ, ರಾಜೋಪಚಾರ ಪೂಜೆ ಹಾಗೂ 28ರ ಶನಿವಾರ ಸುಪ್ರಭಾತ, ಊರಿನಲ್ಲಿ ಪಲ್ಲಕ್ಕಿ ಉತ್ಸವ, ಹಣ್ಣುಕಾಯಿ, ಮಹಾಮಂಗಳಾರತಿ, ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ಶನೇಶ್ವರ ಮಹಾತ್ಮೆ ಬಯಲಾಟ ಮುಂತಾದ ಕಾರ್ಯಕ್ರಮಗಳು ಜರುಗಲಿವೆ.

Banner Ad

ಈ ಎಲ್ಲ ಕಾರ್ಯಕ್ರಮಗಳಲ್ಲಿ ಹಾಗೂ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ನಾಯ್ಕ, ಉಪಾಧ್ಯಕ್ಷ ಜಿ. ಎಂ. ನಾಯ್ಕ ಕಾರ್ಯದರ್ಶಿ ಟಿ. ಕೆ. ಮಡಿವಾಳ,ಮತ್ತು ಸದಸ್ಯರು, ಅರ್ಚಕರು,ಸಿಬ್ಬಂದಿಗಳು ಹಾಗೂ ಊರ ನಾಗರಿಕರು ಮನವಿ ಮಾಡಿದ್ದಾರೆ.

Banner Ad