ಸುದ್ದಿ ಕನ್ನಡ ವಾರ್ತೆ
ಜೊಯಿಡಾ: ಜೆ ಡಿ ಎಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ವಿದೆ, ಹಾಗಾಗಿ ನಾವೆಲ್ಲರೂ ಪಕ್ಷದ ಉತ್ತಮ ಬೆಳವಣಿಗೆಗೆ ಪ್ರಯತ್ನಿಸಿ ಅಧಿಕಾರಕ್ಕೆ ತರೋಣ ಎಂದು ಜೆ ಡಿ ಎಸ್ ಜಿಲ್ಲಾ ಅಧ್ಯಕ್ಷ ಸೂರಜ್ ನಾಯಕ ಸೋನಿ ಹೇಳಿದರು ಅವರು ಸೋಮವಾರ ಜೋಯಿಡಾ ದಲ್ಲಿ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ ಪಕ್ಷದ ಕಾರ್ಯ ಕರ್ತರು,ಮತ್ತು ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಆರಂಭ ದಲ್ಲಿಜೋಯಿಡಾ ತಾಲೂಕಾ ಅಧ್ಯಕ್ಷ ರಾದ ಅಜಿತ್ ಥೋರತ್ ಅವರು ತಾಲೂಕಿನಲ್ಲಿ ಪಕ್ಷ ನಡೆದು ಬಂದ ಮತ್ತು ಹಿಂದೆ ಪಕ್ಷ ಮಾಡಿದ ಸಾಧನೆ ಪಕ್ಷದ ಗೆಲುವು ಗಳ ಬಗ್ಗೆ ವಿವರಿಸಿದರು ರಾಜ್ಯ ಕಾರ್ಯ ದರ್ಶಿ ರೋಷನ್ ಬಾವಾಜಿ, ಶಿರಸಿ ಸಿದ್ದಾಪುರ ಮುಖಂಡರಾದ ಉಪೇಂದ್ರ ಪೈ, ಹಳಿಯಾಳ ತಾಲೂಕಾ ಅಧ್ಯಕ್ಷ ಸುಭಾಸ್ ಗೌಡ, ದಾಂಡೇಲಿ ತಾಲೂಕಾ ಅಧ್ಯಕ್ಷ ಅಕ್ರಮ ಖಾನ್, ಕುಮಟಾದ ದತ್ತು ಪಟಗಾರ, ಜೋಯಿಡಾ ದ ಶ್ಯಾಮ್ ಪೋಕಳೆ, ಇವರುಗಳೆಲ್ಲ ಮುಂದೆ ಬರುವ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಯಲ್ಲಿ ಪಕ್ಷ ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು, ಉತ್ತಮ ಚರ್ಚೆ ನಡೆಯಿತು ಸುಮಾರು 200 ಕ್ಕೂ ಹೆಚ್ಚು ಕಾರ್ಯ ಕರ್ತರು ಸಭೆ ಯಲ್ಲಿ ಭಾಗವಹಿಸಿದ್ದರು, ಪಕ್ಷದ ಪ್ರಮುಖ ರಾದ ರಾಮನಗರ ದ ಶರತ್ ಗುರ್ಜರ್ ಅವರು ಇತ್ತೀಚಿಗೆ ನಿಧನ ರಾಗಿದ್ದು ಅವರಿಗೆ ಒಂದು ನಿಮಿಷ ಮೌನ ದ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.
