ಸುದ್ದಿ ಕನ್ನಡ ವಾರ್ತೆ
ಶಿರಸಿ: ಮುಂಡಗೋಡ ತಾಲೂಕಿನ ಪಾಳಾ ಭದ್ರಾಪೂರದ ವಿಸ್ಟಮ್ ಇಂಟರ್‌ನ್ಯಾಶನಲ್ ಕಾನ್ವೆಂಟ್ ಸ್ಕೂಲ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಕಿಶೋರ ಪಾಂಡುರಂಗ ಪಾಟೀಲ್ ಈತನು ಮಳಗಿ ಪಂಚವಟಿಯ ಜವಾಹರ ನೆಹರೂ ನವೋದಯ ಶಾಲೆಗೆ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆಯಾಗಿರುತ್ತಾನೆ ಎಂದು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಾಜಿ ಜಿ.ಪಂ. ಸದಸ್ಯೆ ಶ್ರೀಮತಿ ರೇಖಾ ಪರಶುರಾಮ ಕಟ್ಟಿಮನಿ ಹಾಗೂ ಪ್ರಧಾನ ಶಿಕ್ಷಕಿ ವಿಜಯಲಕ್ಷ್ಮಿ ಕಟ್ಟಿಮನಿ ಇವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈತನು ನವೋದಯ ಪರೀಕ್ಷೆಯಲ್ಲಿ ಶೇಕಡಾ 95 ರಷ್ಟು ಅಂಕಗಳಿಸಿ ಉತ್ತರ ಕನ್ನಡ ಜಿಲ್ಲೆಗೆ 6ನೇ ಸ್ಥಾನ ಗಳಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ಹಾಗೂ ಈತನ ಸಾಧನೆಯ ಬಗ್ಗೆ ನಮಗೆ ಹೆಮ್ಮೆಯಾಗಿದೆ ಎಂದು ಈ ಶಾಲೆಯ ಸಂಸ್ಥಾಪಕರಾಗಿರುವ ಪರಶುರಾಮ ಕಟ್ಟಿಮನಿ ತಿಳಿಸಿ ಈತನು ಗ್ರಾಮೀಣ ಭಾಗದ ಕೃಷಿಕುಟುಂಬದಲ್ಲಿ ಜನಿಸಿದ್ದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಇಂಟೆಕ್ ವಿಭಾಗದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಕಾತೂರ ಸಹಕಾರಿ ಸಂಘದ ನಿರ್ದೇಶಕ ಪಾಂಡುರಂಗ ವೆಂಕಟೇಶ ಪಾಟೀಲ್ ಅವರ ಪುತ್ರನಾಗಿದ್ದಾನೆ.