ಸುದ್ದಿ ಕನ್ನಡ ವಾರ್ತೆ
ಜೊಯಿಡಾ:12 ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಉಚಿತ ಆರೋಗ್ಯ ಶಿಬಿರ ದಿನಾಂಕ 22 ರಂದು ರವಿವಾರ ಜೊಯಿಡಾ ದ ತಾಲೂಕಾ ಆಸ್ಪತ್ರೆಯಲ್ಲಿ ನಡೆಯಲಿದೆ. ಶ್ರೀ ಆರ್.ವಿ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ವಿಠಲ ಮಕ್ಕಳ ಆರೋಗ್ಯ ಕೇಂದ್ರ ಧಾರವಾಡ , ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸಿಟಿ ಹಳಿಯಾಳ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಧಾರವಾಡ ಇವರುಗಳ ಸಹಯೋಗದಲ್ಲಿ ಈ ಉಚಿತ ಶಿಬಿರ ಜೊಯಿಡಾ ದಲ್ಲಿ ನಾಳೆ ನಡೆಯಲಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರ ವರೆಗೆ ನಡೆಯಲಿದೆ. ಮಕ್ಕಳ ವಿವಿಧ ತಪಾಸಣೆಗೆ ತಜ್ಞ ವೈದ್ಯರುಗಳು ಇರುತ್ತಾರೆ.
ಡಾ. ರಾಜನ್ ದೇಶಪಾಂಡೆ ಡಾ.ಕವನ ದೇಶಪಾಂಡೆ ಡಾ. ಅಚ್ಯುತ್ ಕೆ.ವಿ , ಡಾ. ಎ. ಸಿ ಸ್ವಾಮಿ ಡಾ. ಎನ್.ವಿ ಬೆಂಗೇರಿ ಡಾ. ಶೇಕ್ ಎ. ಡಿ ಡಾ. ಶಂಕರಯಾದವಾಡ
ಡಾ. ಶರದ್ ನಾಡಕರ್ಣಿ ಡಾ. ವಿಜಯಲಕ್ಷ್ಮಿ, ನಾಡಕರ್ಣಿ ಡಾ. ವಿಜಯ ಪ್ರಸಾದ್ ಡಾ.ಅಶೋಕ್ ಜಾಧವ್ ಡಾ.ಅರುಣ್ ಬಬಲೇಶ್ವರ ಡಾ. ಅಮೋಫಿಮಠ, ಡಾ. ದಿಲೀಪ್ ದೇಶಪಾಂಡೆ , ಡಾ.ಪ್ರಶಾಂತ್ ಜುಲ್ಫಿ ಡಾ.ಎಸ್.ಆರ್ ಪಾಟೀಲ್ ಡಾ.ರೇಖಾ ಮಾನೆ , ಈ ಎಲ್ಲ ವೈದ್ಯರುಗಳ ಸಮೂಹವೇ ಜೊಯಿಡಾ ದಲ್ಲಿ ಇರುತ್ತಾರೆ. ಮಕ್ಕಳ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ. ತಾಲೂಕಾ ಆರೋಗ್ಯ ಕೇಂದ್ರ ಮಹಿಳಾ ಕಲ್ಯಾಣ ಇಲಾಖೆ ಕೆ.ಎಲ್. ಇ ಮಿಮಲ ದೇಶಪಾಂಡೆ ನರ್ಸಿಂಗ್ ಸೈನ್ಸಸ್ ದಾಂಡೇಲಿ ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.
