ಸುದ್ದಿ ಕನ್ನಡ ವಾರ್ತೆ
ಅಂಕೋಲಾ: ತಾಲೂಕಿನ ವಾಸರ ಕುದ್ರಿಗೆ ಗ್ರಾಮಪಂಚಾಯತ
ವ್ಯಾಪ್ತಿಯ ಉಳಗದ್ದೆಯಲ್ಲಿ ಕಾಡಿಗೆ ತೆರಳಿ ತರಗೆಲೆಗಳನ್ನು ತರಲು ಹೋದ ಸಂದರ್ಭದಲ್ಲಿ ಕಾಡು ಹಂದಿಯೊಂದು ಯುವಕನ ಮೇಲೆ ದಾಳಿ ನಡೆಸಿದ್ದು, ಕಾಲ ಹೆಬ್ಬೆರಳಿಗೆ ಗಾಯಗೊಳಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮಾಸ್ತಿಕಟ್ಟ ವಲಯ ಅರಣ್ಯದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಕನ್ನೆ ಗೌಡ ಅರುಣ (35) ಗಾಯಗೊಂಡವರಾಗಿದ್ದಾರೆ.
ದಿನಂಪ್ರತಿಯಂತೆ ತಮ್ಮ ಮನೆ ಉಳಗದ್ದೆಯಿಂದ ಕಾಡಿಗೆ ತೆರಳುತ್ತಿರುವ ಸಂದರ್ಭದಲ್ಲಿ ಮರಿಗಳೊಂದಿಗೆ ಬಂದ ಕಾಡು ಹಂದಿ ಇವರ ಮೇಲೆ ದಾಳಿ ನಡೆಸಿತು ಎನ್ನಲಾಗಿದೆ. ಇವರು ಅದರಿಂದ ತಪ್ಪಿಸಿಕೊಳ್ಳಲು ಒಂದು ಮರವನ್ನು ಏರುತ್ತಿರುವಾಗ ಕೆಳಗಿಂದ ಬಂದ ಕಾಡು ಹಂದಿ ಕಾಲಿಗೆ ಕಡಿದು ಹೆಬ್ಬೆರಳು ಅರ್ಧ ತುಂಡಾಗಿದೆ. ಅಂಕೋಲಾ ತಾಲೂಕು
ಆಸ್ಪತ್ರೆಯಲ್ಲಿ ಈತನನ್ನು ದಾಖಲಿಸಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
