ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಶ್ರೀ ಸಾತೇರಿ ದೇವಿಯ ವಾರ್ಷಿಕೋತ್ಸವ ದಿನಾಂಕ:23-03-2026 ರ ಸೋಮವಾರದಂದು ನಡೆಯಲಿದೆ.

ವಾರ್ಷಿಕೋತ್ಸವದ ನಿಮಿತ್ತ ಮಧ್ಯಾಹ್ನ ಶ್ರೀ ಸಾತೇರಿ ದೇವಿಯ ಮಹಾಪೂಜೆ,4:00 ಗಂಟೆಯಿಂದ 9:30 ರವರೆಗೆ ಅನ್ನಸಂತರ್ಪಣೆ ನಡೆಯುವುದು. ರಾತ್ರಿ 10:00 ಗಂಟೆಗೆ ಸವಾಲ್ ಕಾರ್ಯಕ್ರಮ ನಡೆಯಲಿದೆ. ಭಕ್ತರ ವಿಶೇಷ ಮನರಂಜನೆಗಾಗಿ ರಾತ್ರಿ 12:00 ಗಂಟೆಗೆ ಶ್ರೀ ಸಾತೇರಿ ನವ ನಾಟ್ಯ ಕಲಾಬಳಗ ಅಣಶಿ ಅರ್ಪಿಸುವ ಸುಂದರ ಕಲಾಕುಸುಮ ನರಹಂತಕನ ಊರಿನಲ್ಲಿ ಮರಿಹುಲಿ ಅರ್ಥಾತ್:ಮಲತಾಯಿಯ ಮಕ್ಕಳು ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸಾತೇರಿ ದೇವಸ್ಥಾನದ ಸಮಿತಿ ಹಾಗೂ ಊರ ನಾಗರಿಕರು ಅಣಶಿಯವರು ವಿನಂತಿಸಿಕೊಂಡಿದ್ದಾರೆ.